ತಾಳಿಕಟ್ಟುವ ಶುಭವೇಳೆ ಪೊಲೀಸರ ಎಂಟ್ರಿ, ಬಾಲ್ಯ ವಿವಾಹಕ್ಕೆ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

Chikkaballapura--01

ಚಿಕ್ಕಬಳ್ಳಾಪುರ, ಮೇ 14- ರಾತ್ರಿ ಸಂಭ್ರಮದಿಂದ ಮದುವೆ ಆರತಕ್ಷತೆ ಮುಗಿದು ಎಲ್ಲಾ ಶಾಸ್ತ್ರಗಳು ಪೂರೈಸಿದ್ದ ವಧು-ವರರು ಬೆಳಗ್ಗೆ ತಾಳಿಕಟ್ಟುವ ಶುಭಘಳಿಗೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾಗ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳು ಕಲ್ಯಾಣಮಂಟಪ ಪ್ರವೇಶಿಸಿ ಸ್ವಲ್ಪದರಲ್ಲೇ ನಡೆಯಲಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ನಗರದ ಶ್ರೀನಿವಾಸ ಕಲ್ಯಾಣಮಂ ಪದಲ್ಲಿ ಬೆಂಗಳೂರಿನ ಸರ್ಜಾಪುರದ 17 ವರ್ಷದ ವಧು, ಚಿಕ್ಕಬಳ್ಳಾಪುರದ 35 ವರ್ಷದ ವರನ ಮದುವೆ ಇಂದು ನಡೆಯಬೇಕಿತ್ತು. ಮದುವೆಯ ಎಲ್ಲ ಶಾಸ್ತ್ರಗಳು ಮುಗಿದು ಇನ್ನೇನು ವಧು-ವರರ ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ ಮಾಹಿತಿ ಅರಿತ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳು ಮದುವೆ ತಡೆದಿದ್ದಾರೆ.ಅಧಿಕಾರಿಗಳು ವಧು-ವರರ ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ 35 ವರ್ಷದ ವರನಿಗೆ 17 ವರ್ಷದ ಹುಡುಗಿ ಜತೆ ವಿವಾಹ ಆಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮದುವೆ ನಿಲ್ಲಿಸುವಂತೆ ತಾಕೀತು ಮಾಡಿದ ಅಧಿಕಾರಿಗಳು ಹುಡುಗಿ ಹಾಗೂ ವರನ ಪೋಷಕರಿಂದ ವಧುವಿಗೆ 18 ವರ್ಷ ಪೂರೈಸಿದ ನಂತರವಷ್ಟೇ ಅದೇ ವರನಿಗೆ ಮದುವೆ ಮಾಡುವುದಾಗಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಮದುವೆ ನಿಂತರೂ ಮದುವೆಗೆಂದು ಬಂದಿದ್ದ ಜನ ಅದಾಗಲೇ ಸಿದ್ದಗೊಂಡಿದ್ದ ಭೂರಿ ಭೋಜನ ಸವಿದು ಹೊರನಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin