ತಾಳಿ ಕಟ್ಟುವ ಶುಭವೇಳೆ, ಹೃಧಯಾಘಾತದಿಂದ ಮದುವೆ ಮಂಟಪದಲ್ಲೇ ಪ್ರಾಣಬಿಟ್ಟ ವರ..!

ಈ ಸುದ್ದಿಯನ್ನು ಶೇರ್ ಮಾಡಿ

Marriage

ತುಮಕೂರು,ಫೆ.5– ಇಂದು ಹಸೆಮಣೆ ಏರಬೇಕಿದ್ದ ವರನಿಗೆ ಹೃದಯಾಘಾತವಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಕುಣಿಗಲ್ ರಸ್ತೆಯ ರಿಂಗ್‍ರೋಡ್ ಸಮೀಪದ ಗವಿರಂಗ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಮುಹೂರ್ತಕ್ಕೆ ರೆಡಿಯಾಗುತ್ತಿದ್ದ ಗೌರಿಬಿದನೂರು ನಿವಾಸಿ ವಸಂತಕುಮಾರ್(28) ಮೃತಪಟ್ಟ ವರ.   ನಿನ್ನೆ ರಾತ್ರಿಯೇ ಆರತಕ್ಷತೆ ಕಾರ್ಯಕ್ರಮಗಳೆಲ್ಲ ಮುಗಿದಿದ್ದವು. ವಧು-ವರರ ಕಡೆಯವರು ಮುಹೂರ್ತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕಲ್ಯಾಣ ಮಂಟಪವನ್ನು ಅದ್ಧೂರಿಯಾಗಿ ಸಿಂಗರಿಸಲಾಗಿತ್ತು. ಬಂಧು-ಬಳಗದವರು, ಸ್ನೇಹಿತರು ಮದುವೆಗೆ ಆಗಮಿಸಿದ್ದರು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವಸಂತ್‍ಕುಮಾರ ಮಧುಗಿರಿಯ ವಧುವಿನೊಂದಿಗೆ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಬೆಳಗಿನ ಶಾಸ್ತ್ರಕ್ಕೆ ಖುಷಿ ಖುಷಿಯಿಂದಲೇ ಶಾಸ್ತ್ರಕ್ಕೆ ರೆಡಿಯಾಗಿದ್ದರು. ಶಾಸ್ತ್ರ ನಡೆಯುವ ವೇಳೆ ಬೆಳಗ್ಗೆ 7.30ರ ಸಮಯದಲ್ಲಿ ಇದ್ದಕ್ಕಿದ್ದಂತೆ ವರ ಕುಸಿದುಬಿದ್ದಿದ್ದಾನೆ.  ಗಾಬರಿಗೊಂಡು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜೀವ ಹೊಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮದುವೆಯ ಖುಷಿಯಲ್ಲಿದ್ದವರಿಗೆ ವರನ ಸಾವಿನ ಸುದ್ದಿ ಕೇಳಿ ಆಘಾತವುಂಟಾಗಿತ್ತು. ಬಂಧು, ಬಳಗದವರ ಆಕ್ರಂದನ ಮುಗಿಲು ಮುಟ್ಟಿತು.

ತಿಲಕ್‍ಪಾರ್ಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದರು. ಆದದ್ದು ಆಗಿಹೋಯಿತು. ಇನ್ನೇನು ಮಾಡಲಿಕ್ಕಾಗುತ್ತದೆ ಇದೇ ಮುಹೂರ್ತದಲ್ಲಿ ಹುಡುಗಿಗೊಂದು ಬೇರೆ ಮದುವೆ ಮಾಡಲು ಸಾಧ್ಯವೇ ಎಂದು ಹಲವು ಹಿರಿಯರು ಯೋಚಿಸುತ್ತಿದ್ದದು ಕೇಳಿಬಂತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin