ತಿಂಗಳಾದರೂ ಪತ್ತೆಯಾಗದ ವಿಮಾನ : 29 ಜನ ಬದುಕುಳಿದ ಸಾಧ್ಯತೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

AN-32

ನವದೆಹಲಿ, ಆ.12- ಬಂಗಾಳಕೊಲ್ಲಿಯಲ್ಲಿ ಕಳೆದ ತಿಂಗಳು ಕಣ್ಮರೆಯಾದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ 29 ಮಂದಿ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಸರ್ಕಾರ ಲೋಕಸಭೆಗೆ ಇಂದು ಮಾಹಿತಿ ನೀಡಿದೆ. ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಇಲಾಖೆ ರಾಜ್ಯ ಸಚಿವ ಸುಭಾಷ್ ರಾಮ್‍ರಾವ್ ಭ್ರಮೆ, ಈ ದುರಂತದಲ್ಲಿ ಯಾರೂ ಬದುಕುಳಿದಿರುವ ಸಂಭವ ಇಲ್ಲ. ಆದರೂ, ಕಣ್ಮರೆಯಾದವರಿಗೆ ಮತ್ತು ವಿಮಾನದ ಅವಶೇಷಗಳಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದರು.  ಕಳೆದ ತಿಂಗಳು ಬಂಗಾಳಕೊಲ್ಲಿ ಪ್ರದೇಶದಲ್ಲಿ ನಾಪತ್ತೆಯಾದ ವಿಮಾನದ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin