ತಿಂಗಳೊಳಗೆ 2,010 ಗೂಂಡಾಗಳ ಬಂಧನಕ್ಕೆ ಕೇರಳ ಸಿಎಂ ಮಹತ್ವದ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Kerala-CM

ತಿರುವನಂತಪುರಂ, ಫೆ.21- ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.   ಗುಪ್ತಚರ ಘಟಕ ಪಟ್ಟಿ ಮಾಡಿರುವ 2,010 ಗೂಂಡಾಗಳನ್ನು ಇನ್ನೊಂದು ತಿಂಗಳ ಒಳಗೆ ಬಂಧಿಸುವಂತೆ 14 ಜಿಲ್ಲೆಗಳ ಕಲೆಕ್ಟರ್ (ಜಿಲ್ಲಾಧಿಕಾರಿ)ಗಳಿಗೆ ಅವರು ಆದೇಶ ನೀಡಿದ್ದು, ದುಷ್ಕರ್ಮಿಗಳ ಸೆರೆ ಕಾರ್ಯಾಚರಣೆ ಚುರುಕುಗೊಂಡಿದೆ.
ಕರಾವಳಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಲೆ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಹತ್ಯೆ, ಗ್ಯಾಂಗ್‍ವಾರ್, ದರೋಡೆ-ಸುಲಿಗೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಈ ನಿರ್ದೇಶನ ನೀಡಿದ್ದಾರೆ.

ಗುಪ್ತಚರ ಘಟಕದ ಗೂಂಡಾಗಳ ಪಟ್ಟಿಯಲ್ಲಿ ಅಳಪ್ಪುಳ (336) ಮೊದಲ ಸ್ಥಾನದಲ್ಲಿದೆ. ಕಣ್ಣೂರು (305) ಮತ್ತು ರಾಜಧಾನಿ ತಿರುವನಂತಪುರಂ (266) ಕ್ರಮವಾಗಿ ಎರಡು ಮತ್ತು ಮೂರನೇ ಕ್ರಮಾಂಕದಲ್ಲಿವೆ. 14 ಜಿಲ್ಲೆಗಳಲ್ಲಿರುವ 2,010 ಗೂಂಡಾಗಳನ್ನು ಇನ್ನು 30 ದಿನಗಳ ಒಳಗಾಗಿ ಬಂಧಿಸಿ ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕಲೆಕ್ಟರ್‍ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.   ರಾಜ್ಯದೆಲ್ಲೆಡೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಭಾರೀ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದ್ದವು.

ಪಲ್ಸರ್ ಸುನಿಗಾಗಿ ತೀವ್ರ ಶೋಧ :

ನಟಿ ಭಾವನಾ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಹಾಗೂ ಮತ್ತವನ ನಾಲ್ವರು ಸಹಚರರಿಗಾಗಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin