ತಿಂಗಳ ಅಂತ್ಯಕ್ಕೆ 10 ರೈಲ್ವೆ ನಿಲ್ದಾಣಗಳಲ್ಲಿ 1 ರೂ. ಕ್ಲಿನಿಕ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

clinic

ಮುಂಬೈ, ಆ.14 – ಪಶ್ಚಿಮ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ತಿಂಗಳ ಅಂತ್ಯಕ್ಕೆ 10 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ 1 ರೂ. ಕ್ಲಿನಿಕ್ ಅನ್ನು ಪ್ರಾರಂಭಿಸಲು ಚಿಂತಿಸಲಾಗಿದೆ.  ಈ ಯೋಜನೆ ಯಶಸ್ವಿಯಾದರೆ ಇನ್ನೂ 25 ರೈಲ್ವೆ ನಿಲ್ದಾಣಗಳಲ್ಲಿ ಈ ಕ್ಲಿನಿಕ್‍ಗಳನ್ನು ತೆರೆಯಲಾಗುವುದು ಎಂದು ಪಶ್ಚಿಮ ರೈಲ್ವೆ ಮೂಲಗಳು ತಿಳಿಸಿವೆ.  ಈ ಕುರಿತು ಮಾತನಾಡಿದ ವೈದ್ಯ ರಾಹುಲ್ ಗುಲೆ ರೈಲ್ವೆ ಪ್ರಯಾಣಿಕರ ಸುರಕ್ಷತ ದೃಷ್ಟಿಯಿಂದ ನಾವು ಈ 1 ರೂ. ಕ್ಲಿನಿಕ್ ಅನ್ನು ತೆರೆಯಲು ಯೋಚಿಸುತ್ತಿದ್ದೇವೆ, ಈಗಾಗಲೇ ನಾವು ಕೇಂದ್ರ ರೈಲ್ವೆಯ ಅನೇಕ ರೈಲು ನಿಲ್ದಾಣಗಳಲ್ಲಿ ಈ ಕ್ಲಿನಿಕ್ ಅನ್ನು ಆರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ಬರುತ್ತಿದೆ , ಮೇ 10, 2017 ರಂದು ನಾವು ಗಟ್ಕಾಕೋಪರ್ ರೈಲ್ವೆ ನಿಲ್ದಾಣದಲ್ಲಿ 1 ರೂ. ಕ್ಲಿನಿಕ್ ಆರಂಭಿಸಿದವು. ಅನೇಕ ಪ್ರಯಾಣಿಕರು ಇದರ ಉಪಯೋಗವನ್ನು ಕೂಡ ಪಡೆದಿದ್ದಾರೆ ಎಂದರು.

 

Facebook Comments

Sri Raghav

Admin