ತಿಮ್ಮಪ್ಪನಿಗೆ ಹರಕೆ ತೀರಿಸಿದ ಸಿಂಧು, ಗೋಪಿ

ಈ ಸುದ್ದಿಯನ್ನು ಶೇರ್ ಮಾಡಿ

Sindhu

ತಿರುಪತಿ, ಸೆ.4- ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬೆಳ್ಳಿ ತಾರೆ ಪಿ.ವಿ.ಸಿಂಧು ಹಾಗೂ ಆಕೆಯ ಕೋಚ್ ಪುಲ್ಲೇಲ ಗೋಪಿಚಂದ್ ಅವರು ಇಂದು ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.  ಹೈದರಾಬಾದ್ ಆಟಗಾರ್ತಿ ಸಿಂಧು 68 ಕೆಜಿ ಬೆಲ್ಲದ ತುಲಾಭಾರ ಹರಕೆ ತೀರಿಸಿ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಬೆಲ್ಲದ ಬಾಬ್ತು 2381ರೂ.ಗಳನ್ನು ಪಾವತಿಸಿದರು.  ಪುಲ್ಲೇಲ ಗೋಪಿಚಂದ್ ತಿಮ್ಮಪ್ಪನಿಗೆ ಮುಡಿ ನೀಡಿ ಹರಕೆ ತೀರಿಸಿ ಬಳಿಕ ಪೂಜೆ ಸಲ್ಲಿಸಿದರು.  ಕೋಚ್ ಗೋಪಿಚಂದ್ ಗರಡಿಯಲ್ಲಿ ಪಳಗಿದ ಸಿಂಧು ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿ ಹೊಸ ಮೈಲುಗಲ್ಲು ಸ್ಥಾಪನೆಯ ಸಾಧನೆ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin