ಹುಟ್ಟುಹಬ್ಬದಂದು ತಿಮ್ಮಪ್ಪನ ದರ್ಶನ ಪಡೆದ ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--02

ಬೆಂಗಳೂರು, ಮೇ 18- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಇಂದು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದರು.  ನಿನ್ನೆಯೇ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ತೆರಳಿದ್ದ ಗೌಡರು ಇಂದು ಬೆಳಗ್ಗೆ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.  ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡ, ಪುತ್ರರಾದ ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರಮೇಶ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಪುತ್ರಿ ಅನುಸೂಯ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ತಿಮ್ಮಪ್ಪನ ದರ್ಶನ ಪಡೆದರು. ಪ್ರತಿ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ದೇವೇಗೌಡರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವುದು ವಾಡಿಕೆ. ಅದರಂತೆ ತಮ್ಮ 86ನೇ ಹುಟ್ಟುಹಬ್ಬದಲ್ಲೂ ತಿರುಪತಿಗೆ ತೆರಳಿ ದೇವರದ ದರ್ಶನ ಪಡೆದಿದ್ದಾರೆ.

Facebook Comments

Sri Raghav

Admin