ತಿರುಪತಿ ತಿಮ್ಮಪ್ಪ ಹುಂಡಿಯಲ್ಲಿ 35 ಟನ್ ವಿದೇಶ ನಾಣ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

35-tons

ತಿರುಪತಿ, ಅ.21-ವಿಶ್ವ ಪ್ರಸಿದ್ದ ತಿರುಪತಿ ತಿರುಮಲ ದೇವಾಲಯಕ್ಕೆ ಸುಮಾರು 35 ಸಾವಿರ ಕೆಜಿಯಷ್ಟು ವಿದೇಶಿ ನಾಣ್ಯಗಳು ದೇಣಿಗೆ ರೂಪದಲ್ಲಿ ಹರಿದು ಬಂದಿವೆ ಎಂದು ತಿರುಪತಿ-ತಿರುಮಲ ದೇವಾಲಯ ಟ್ರಸ್ಟ್ ತಿಳಿಸಿದೆ. ಶೀಘ್ರದಲ್ಲೇ ಇವುಗಳನ್ನು ಭಾರತೀಯ ರೂಪಾಯಿಗೆ ಬದಲಿಸಿಕೊಳ್ಳಲಾಗುವುದು. ದೇಶ-ವಿದೇಶದಿಂದ ಪ್ರತಿನಿತ್ಯ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ವಿದೇಶಿ ಭಕ್ತರು ತಮ್ಮ ದೇಶದ ನಾಣ್ಯಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಇದುವರೆಗೂ ಹುಂಡಿಯಲ್ಲಿ 35 ಸಾವಿರ ಕೆಜಿಯಷ್ಟು ನಾಣ್ಯಗಳು ಸಂಗ್ರಹವಾಗಿವೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಸಾಂಬಶಿವರಾವ್ ತಿಳಿಸಿದ್ದಾರೆ. ಇತ್ತೀಚೆಗೆ ಟಿಟಿಡಿ ಹಣಕಾಸು ವಿಭಾಗದಿಂದ ನಾಣ್ಯಗಳನ್ನು ಪ್ರತ್ಯೇಕಿಸುವಂತೆ ತಿಳಿಸಿದ ಸಂದರ್ಭದಲ್ಲಿ 35 ಸಾವಿರ ಕೆಜಿ ವಿದೇಶಿ ನಾಣ್ಯಗಳನ್ನು ಹುಂಡಿಗೆ ಹರಿದು ಬಂದಿರುವುದು ಗೊತ್ತಾಗಿದೆ.

ಈ ನಾಣ್ಯಗಳನ್ನು ಭಾರತೀಯ ರೂಪಾಯಿಗೆ ಬದಲಾಯಿಸಿಕೊಡುವಂತೆ ಆರ್‍ಬಿಐಗೆ ಟಿಟಿಡಿ ಮನವಿ ಮಾಡಿದೆ. ಆರ್‍ಬಿಐ ಸಲಹೆ ಪಡೆದು ರಾಷ್ಟ್ರೀಯ ಬ್ಯಾಂಕ್‍ಗಳೊಂದಿಗೆ ಮಾತುಕತೆ ನಡೆಸಲಿದ್ದು, ವಿದೇಶಿ ನಾಣ್ಯ ಬದಲಾಯಿಸಲು ಐಸಿಐಸಿಐ ಬ್ಯಾಂಕ್ ಆಸಕ್ತಿ ಹೊಂದಿದೆ ಎಂದು ಹೇಳಿದರು. ತಿರುಪತಿ ತಿಮ್ಮಪ್ಪನಿಗೆ ಮಲೇಷ್ಯಾ, ಸಿಂಗಪೂರ, ಅಮೆರಿಕ ಭಕ್ತರಿಂದ ಅತಿ ಹೆಚ್ಚು ನಾಣ್ಯಗಳು ಬಂದಿವೆ.

► Follow us on –  Facebook / Twitter  / Google+

Facebook Comments

Sri Raghav

Admin