ತಿಳಿಗೊಂಡ ಹೆಗ್ಗನಹಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

Hegganahalli
ಬೆಂಗಳೂರು, ಸೆ.14- ಕಾವೇರಿ ಗಲಭೆಯಲ್ಲಿ ಹೊತ್ತಿ ಉರಿದ ನಗರದ ಹೆಗ್ಗನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಸ್ಥಿತಿ ಮೇಲ್ನೋಟಕ್ಕೆ ತಿಳಿಗೊಂಡಿದ್ದರೂ ಬೂದಿಮುಚ್ಚಿದ ಕೆಂಡದಂತಿದೆ.ಈ ಪ್ರದೇಶಗಳಲ್ಲಿ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿದ್ದು, ಡಿಸಿಪಿಗಳು, ಎಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂಹೂಡಿದ್ದಾರೆ. ಸ್ಥಳೀಯಪೊಲೀಸರ ಜತೆಗೆ ಆರ್‍ಎಎಫ್ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಪ್ರದೇಶಗಳಲ್ಲಿ ಇಂದು ಮುಂಜಾನೆ ಯಾವುದೇ ಹೋಟೆಲ್, ಅಂಗಡಿಗಳು ತೆರೆದಿರಲಿಲ್ಲ. ಮಧ್ಯಾಹ್ನದ ನಂತರ ಕೆಲವು ಅಂಗಡಿಗಳು ಮಾತ್ರ ತೆರೆಯಲಾಗಿತ್ತು. ಸಂಚಾರ ಬಹಳಷ್ಟು ವಿರಳವಾಗಿತ್ತು. ಕಳೆದ ಸೋಮವಾರ ಈ ಪ್ರದೇಶಗಳಲ್ಲಿ ಗಲಭೆಯಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಪರಿಸ್ಥಿತಿ ತಿಳಿಗೊಂಡಿದ್ದರೂ ಬೂದಿಮುಚ್ಚಿದ ಕೆಂಡದಂತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin