ತಿವಾರಿ ಸಹೋದರನಿಂದ ಸಚಿವರಿಗೆ ದೂರವಾಣಿ ಕರೆ, ಆಹಾರ ಇಲಾಖೆ ಅಕ್ರಮದ ಬಗ್ಗೆ ಮಾಹಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

Anurag-tiwary

ಬೆಂಗಳೂರು, ಮೇ 23– ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸೋದರ ಮಯಾಂಕ್ ವಾರಿ ಇಂದು ಸಚಿವ ಯು.ಟಿ. ಖಾದರ್‍ಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ. ಖಾದರ್ ಅವರಿಗೆ ಕರೆ ಮಾಡಿದ್ದ ಮಯಾಂಕ್ ತನ್ನ ಸೋದರ ಆಹಾರ ನಿಗಮದ ಆಯುಕ್ತರಾಗಿದ್ದಾಗ ಹಗರಣವೊಂದನ್ನು ಬಯಲು ಮಾಡಿದ್ದರು. ಇದೇ ಕಾರಣಕ್ಕೆ ಇವರ ಕೊಲೆ ನಡೆದಿದೆ ಎಂದು ದೂರಿದ್ದಾರೆ.  ಕರ್ನಾಟಕದಲ್ಲಿ ದೊಡ್ಡದೊಂದು ಹಗರಣ ನಡೆದಿದೆ ಎಂಬುದರ ಬಗ್ಗೆ ಸೋದರ ಅನುರಾಗ್ ನನ್ನ ಬಳಿ ಹೇಳಿಕೊಂಡಿದ್ದರು. ಅದು ನನ್ನ ಗಮನಕ್ಕೆ ಬಂದಿದೆ ಎಂದಿದ್ದರು.ಇದೇ ವಿಚಾರವಾಗಿ ಅವರ ಕೊಲೆ ನಡೆದಿರಬಹುದು ಎಂಬ ಅನುಮಾನ ನಮಗೆ ಇದೆ. ಇದರಿಂದ ಸೋದರನ ಸಾವಿನ ಕಾರಣ ಹೊರಬರಬೇಕಿದೆ. ಅದಕ್ಕೆ ತಮ್ಮ ಸಹಕಾರಬೇಕೆಂದು ಮಯಾಂಕ್ ಕೋರಿದ್ದಾರೆ.  ಈ ವೇಳೆ ಮಯಾಂಕ್‍ಗೆ ಸಾಂತ್ವನ ಹೇಳಿದ ಖಾದರಧ, ಅನುರಾಗ್ ತಿವಾರಿ ಒಬ್ಬ ಪ್ರಾಮಾಣಿಕ ಅಧಿಕಾರಿ ಆಗಿದ್ದರು. ಅವರ ಸಾವಿನಿಂದ ದೊಡ್ಡ ನಷ್ಟವಾಗಿದೆ. ಅವರು ಹತ್ಯೆಗೀಡಾಗಿರುವುದು ಉತ್ತರ ಪ್ರದೇಶದಲ್ಲಿ. ಅಲ್ಲಿನ ಸರ್ಕಾರ ಇದಕ್ಕೆ ಸೂಕ್ತ ಉತ್ತರ ನೀಡಬೇಕು. ಸದ್ಯ ಅಲ್ಲಿನ ಸರ್ಕಾರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿದೆ. ಇವರ ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನಮಗೂ ಕೂಡ ಅವರ ಹಂತಕರನ್ನು ಪತ್ತೆ ಹಚ್ಚಲಿ ಎಂಬ ಬಯಕೆ ಇದೆ ಎಂದು ಹೇಳಿದ್ದಾರೆ.

ಯಾವುದೇ ಸರ್ಕಾರ ಕೂಡ ಐಎಎಸ್ ಅಧಿಕಾರಿಗಳನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಯಾವುದೇ ಹಗರಣ ಬಯಲು ಮಾಡಿದ್ದರೂ ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ಅಥವಾ ಸಿಎಂ, ಗೃಹ ಸಚಿವರ ಗಮನಕ್ಕೆ ತರಬೇಕಿತ್ತು. ಇಂತಹ ಯಾವುದೇ ವಿವರವನ್ನು ಅವರು ನಮ್ಮ ಗಮನಕ್ಕೆ ತಂದಿರಲಿಲ್ಲವೆಂದು ಸಚಿವ ಖಾದರ್ ಅವರು ಮಯಾಂಕ್ ತಿವಾರಿಗೆ ಹೇಳಿದ್ದಾರೆ ಎನ್ನಲಾಗಿದೆ.   ಅನುರಾಗ್ ಸಾವಿನ ತನಿಖೆ ವಿಚಾರದಲ್ಲಿ ನಮ್ಮ ಕಡೆಯಿಂದ ಎಲ್ಲಾ ವಿಧದ ಸಹಕಾರ ಸಿಗಲಿದೆ. ಈಗಾಗಲೇ ಸಾಕಷ್ಟು ವಿವರವನ್ನು ನಾವು ನೀಡಿದ್ದೇವೆ. ನಮ್ಮ ಅಧಿಕಾರಿಗಳನ್ನು ಕೂಡ ಸ್ಥಳಕ್ಕೆ ಕಳಿಸಿಕೊಟ್ಟಿದ್ದೇವೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin