ತೀರ್ಪು ಖಂಡಿಸಿ ಹೆದ್ದಾರಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

karnataka--janapara--vedike

ಚನ್ನಪಟ್ಟಣ, ಸೆ.28- ಸುಪ್ರೀಂ ಕೋರ್ಟ್ ಇನ್ನು ಮೂರು ದಿನಗಳ ಕಾಲ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವ ಹಿನ್ನೆಲೆಯನ್ನು 144 ಸೆಕ್ಷನ್ ಜಾರಿಯಿದ್ದರೂ ಕೂಡ ಅದನ್ನು ಗಣನೆಗೆ ತೆಗೆದುಕೊಳ್ಳದೇ ತೀರ್ಪನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‍ಗೌಡ, ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಕರ್ನಾಟಕದ ಜನತೆಗೆ ಪದೇ ಪದೇ ಅನ್ಯಾಯ ಮಾಡುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ನೀರು ಬಿಟ್ಟರೆ, ವೇದಿಕೆಯು ಯಾವ ಬಂಧನ, ಲಾಟಿ ಏಟಿಗೂ ಹೆದರದೇ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಮನಗರ ತಾಲ್ಲೂಕು ಅಧ್ಯಕ್ಷೆ ನಾಗರತ್ನ, ತಾಲ್ಲೂಕು ಗೌರವಾಧ್ಯಕ್ಷರುಗಳಾದ ಮಂಗಳಮ್ಮ, ಪುಟ್ಟಮ್ಮ, ಪದಾಧಿಕಾರಿಗಳಾದ ಮುನಿರಾಜ್‍ಗೌಡ, ಸವಿತಾ ಸಮಾಜದ ಕುಮಾರ್, ಎಲೆಕೇರಿ ರಾಜೇಶ್, ಹೊಟೇಲ್ ತಮ್ಮಣ್ಣ, ಅರುಣ್, ಮಧು, ಚನ್ನಪ್ಪ, ದೀಲಿಪ್, ಸೊಳ್ಳೆ ರಘು, ಕಡ್ಲೆಪುರಿ ಅರುಣ, ಕೃಷ್ಣ, ನಾಗೇಶ್, ಸಿದ್ದಪ್ಪ, ಪಾಪ, ಶನಿ ಇನ್ನು ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin