ತುಂಗಭದ್ರ ಜಲಾಶಯದ ಹೂಳು ತೆಗೆಯುವ ಪ್ರಸ್ತಾವನೆ ಇಲ್ಲ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

M-B-Patil-Session--002

ಬೆಳಗಾವಿ (ಸುವರ್ಣಸೌಧ), ನ.15-ತುಂಗಭದ್ರ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ಹೊರಹಾಕಲು 60 ಸಾವಿರ ಎಕರೆ ಜಮೀನಿನ ಅಗತ್ಯವಿರುವುದರಿಂದ ಸರ್ಕಾರದ ಮುಂದೆ ಇದರ ಪ್ರಸ್ತಾವನೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನಪರಿಷತ್‍ನಲ್ಲಿಂದು ಸ್ಪಷ್ಟಪಡಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಎನ್.ಎಸ್.ಬೋಸ್‍ರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಂಗಭದ್ರಾ ಜಲಾಶಯದಲ್ಲಿ ಹೂಳು ಸಂಗ್ರಹವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದ ಹೂಳನ್ನು ತೆಗೆದು ಹೊರಹಾಕಬೇಕಾದರೆ 60 ಸಾವಿರ ಎಕರೆ ಜಮೀನಿನ ಅಗತ್ಯವಿದೆ. ಇದು ತೀರಾ ಕಷ್ಟಸಾಧ್ಯ ಎಂದು ಹೇಳಿದರು.

ಈ ಅಣೆಕಟ್ಟಿನಲ್ಲಿ 32 ಟಿಎಂಸಿ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಲ್ಲದೆ, ತುಂಗಭದ್ರಾ ಜಲಾಶಯವು ಅಂತರ್‍ರಾಜ್ಯ ಜಲಾಶಯವಾಗಿರುವುದರಿಂದ ಇದು ತುಂಗಭದ್ರಾ ಮಂಡಳಿ ವ್ಯಾಪ್ತಿಗೆ ಒಳಪಡುತ್ತದೆ. ನಾವು ಯಾವುದೇ ರೀತಿಯ ಕಾಮಗಾರಿ ಮಾಡಬೇಕಾದರೂ ಮಂಡಳಿ ಅನುಮತಿ ಪಡೆಯದೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಹೆಚ್ಚಿನ ನೀರು ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin