ತುಮಕೂರಿಗೆ ಸ್ಮಾರ್ಟ್ ಸಿಟಿ ಇಂಡಿಯಾ 2019 ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 25- ಕೇಂದ್ರ ಸರ್ಕಾರದ ಮಹತ್ವ ಯೋಜನೆಯಾದ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಗಿಕ ಯೋಜನೆಯಾದ ಸ್ಮಾರ್ಟ್ ಲಂಚ್ ಅಮಾನಿಕೆರೆ ಯೋಜನೆಗೆ ಸ್ಮಾರ್ಟ್ ಸಿಟಿ ಇಂಡಿಯಾ 2019 ಪ್ರಶಸ್ತಿ ಲಭ್ಯವಾಗಿದೆ.

ನವದೆಹಲಿಯಲ್ಲಿ ಮೇ 22 ರಿಂದ 24ರವರೆಗೆ ನಡೆದ ಐದನೆ ಸ್ಮಾರ್ಟ್ ಸಿಟಿ ಎಕ್ಸ್‍ಫೋ 2019ರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಳು ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಈ ಪ್ರಶಸ್ತಿ ಲಭ್ಯವಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

ಮೇ 24ರಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಯೋಜನೆಯ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಸಿ ಡಾ.ಶಾಲಿನಿ ರಜನೀಶ್, ಸಂಸ್ಥೆಯ ವ್ಯವ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಬಿ.ಪಿ.ರಂಗಸ್ವಾಮಿ, ಮುಖ್ಯ ಎಂಜಿನಿಯರ್ ಡಾ.ಎನ್.ಆರ್.ಶಾಂತರಾಜಣ್ಣ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.

ಸ್ಮಾರ್ಟ್ ಲಾಂಚ್ ಒಂದು ನವೀನ ಯೋಜನೆಯಾಗಿದೆ. ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಸಾರ್ವಜನಿಕರ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಒಂದೇ ಸೂರಿನಡಿ ಕೈಗೆಟಕುವ ಸೌಲಭ್ಯಗಳನ್ನು ಕಲ್ಪಿಸುವುದು. ವಿದ್ಯಾರ್ಥಿಗಳಿಗೆ ಇ ಗ್ರಂಥಾಲಯ ಡಿಜಿಟಲ್ ಓದುವಿಕೆ,

ಸಾರ್ವಜನಿಕರಿಗೆ ಡಿಜಿಟಲ್ ಸೇವೆಗಳು, ಕಿಯೋಸ್‍ಕೆಫೆ ಹಾಗೂ ಇ ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಹಲವಾರು ಯೋಜನೆಗಳು ಇದರಲ್ಲಿದೆ. ಒಟ್ಟಾರೆಯಾಗಿ ನಾಗರಿಕ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯ ವ್ಯಾಪ್ತಿಯಲ್ಲಿ ಎಟಿಎಂ , ಹೆಲ್ತ್ ಎಟಿಎಂ ಕೂಡಾ ಇದ್ದು , ಹಲವಾರು ಉದ್ದೇಶಗಳನ್ನು ಹೊಂದಿದೆ. ಸ್ಮಾರ್ಟ್ ಸಿಟಿ ಇಂಡಿಯಾ 2019 ಪ್ರಶಸ್ತಿ ಲಭಿಸಿರುವುದಕ್ಕೆ ಹಿಂದಿನ ಜಿಲ್ಲಾಧಿಕಾರಿ ಮೋಹನ್ ರಾಜ್ , ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅಶಾದ್ ಆರ್ ಷರೀಫ್ ಮತ್ತು ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಪಾಲಿಕೆಯ ಈಗಿನ ಆಯುಕ್ತ ಟಿ.ಭೂಬಾಲನ್ ಮತ್ತು ಅಧಿಕಾರಿಗಳು , ಸಿಬ್ಬಂದಿಗಳ ಶ್ರಮದ ಫಲವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ