ತುಮಕೂರಿಗೆ ಹೆಚ್ಚುವರಿ 25 ಬಸ್‍ಗಳಿಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

TUMAKURU--BUS

ತುಮಕೂರು, ಆ.20- ಪ್ರಯಾಣಿಕರ ಅನುಕೂಲಕ್ಕಾಗಿ ಇಂದು 25 ನೂತನ ನಗರ ಸಾರಿಗೆ ಬಸ್‍ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.ರಾಜ್ಯ ಸರ್ಕಾರ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ 637 ಬಸ್‍ಗಳಿಗೆ ಚಾಲನೆ ನೀಡುತ್ತಿದೆ. ಕೆಲ ತಾಂತ್ರಿಕ ದೋಷಗಳಿಂದ ಬಸ್‍ಗಳ ಸಂಚಾರದಲ್ಲಿ ಅಡಚಣೆಯಾಗಿತ್ತು. ಈಗ ನೂತನವಾಗಿ ಸಿದ್ದಪಡಿಸಿರುವ ಬಸ್‍ಗಳು ರಸ್ತೆಗಿಳಿಯುತ್ತಿದ್ದು, ಅತ್ಯಾಧುನಿಕ ಹಾಗೂ ಸುಸಜ್ಜಿತ ವ್ಯವಸ್ಥತಯನ್ನು ಒಳಗೊಂಡಿವೆ.
ಎಲೆಕ್ಟ್ರಾನಿಕ್ ಡಿಸ್‍ಪ್ಲೇ, ಸಿಸಿ ಟಿವಿ, ಉತ್ತಮ ಆಸನಗಳಿವೆ. ನೂತನ ಬಸ್‍ಗಳನ್ನು ಕಲ್ಪಿಸಬೇಕೆಂದು ಸಂಸದ ಮುದ್ದಹನುಮೇಗೌಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರಿಗೆ ಸಚಿವರ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ನಗರ ಸಾರಿಗೆಗೆ 37 ಬಸ್‍ಗಳಿಗೆ ಮಂಜೂರಾತಿ ದೊರೆತಿದ್ದು, ಇದರಲ್ಲಿ ಇಂದು 25 ಬಸ್‍ಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಉಳಿದ ಬಸ್‍ಗಳಿಗೂ ಸಹ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಬಸ್‍ಗಳ ತೊಂದರೆ ಇರುವ ಕಡೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ರೂಟ್ ಮ್ಯಾಪ್ ಸಿದ್ದಪಡಿಸಿದ್ದಾರೆ. ಅಗತ್ಯ ಇರುವ ಕಡೆ ಬಸ್‍ಗಳು ಸಂಚರಿಸಲಿವೆ ಎಂದರು.ಇದಕ್ಕೆ ಶಾಸಕರು, ಸಂಸದರ ಶ್ರಮ ಹೆಚ್ಚಾಗಿದ್ದು, ಇದೇ ವೇಳೆ ಅವರನ್ನು ಅಭಿನಂದಿಸುವುದಾಗಿ ಸಚಿವರು ತಿಳಿಸಿದರು.ಶಾಸಕರ ರಫೀಕ್ ಅಹಮ್ಮದ್ ಮಾತನಾಡಿ, ನಗರ ದಿನೇ ದಿನೇ ಬೆಳೆಯುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಹೆಚ್ಚುವರಿ ಬಸ್‍ಗಳನ್ನು ಕಲ್ಪಿಸಿದೆ. ಹೆಚ್ಚುವರಿ ಬಸ್‍ಗಳ ಮಂಜೂರಾತಿಗಾಗಿ ಸಂಸದ ಮುದ್ದಹನುಮೇಗೌಡರು ಶ್ರಮಿಸಿದ್ದಾರೆ. ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಜೆ ನರ್ಮ್ (ಅಮೃತ) ಯೋಜನೆಯಡಿ 34 ನೂತನ ಟಾಟಾ ಬಸ್‍ಗಳು ಮಂಜೂರಾಗಿವೆ. ಒಂದು ವಾಹನಕ್ಕೆ 37.50ಲಕ್ಷ ವೆಚ್ಚ ಮಾಡಲಾಗಿದ್ದು, ಹೊಸ ನಗರ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.ಜಿಲ್ಲಾಧಿಕಾರಿ ಮೋಹನ್‍ರಾಜ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್, ಎಡಿಸಿ ಅನಿತಾ ಸೇರಿದಂತೆ ಮತ್ತಿತರರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin