ತುಮಕೂರಿನಲ್ಲಿ ದೇಶ ವಿರೋಧಿ ಘೋಷಣೆ : ತೀವ್ರಗೊಂಡ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

protest

ತುಮಕೂರು, ಆ.16- ವಿದ್ಯಾರ್ಥಿ ನಿಲಯದಲ್ಲಿ ಅನ್ಯ ರಾಜ್ಯದ ವಿದ್ಯಾರ್ಥಿಗಳ ತಂಡ ವೊಂದು ದೇಶ ವಿರೋಧಿ ಘೋಷಣೆ ಗಳನ್ನು ಕೂಗಿ ಪುಂಡಾಟ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ 10 ವಿದ್ಯಾರ್ಥಿಗಳು ಆ.14ರಂದು ಮಧ್ಯರಾತ್ರಿ ಸ್ನೇಹಿತನೊಬ್ಬನ ಹುಟ್ಟುಹಬ್ಬ ಆಚರಿಸಿಕೊಂಡು ಮದ್ಯ ಸೇವಿಸಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿಕೊಂಡು ಅಡ್ಡಾಡುತ್ತಿದ್ದರು ಎನ್ನಲಾಗಿದೆ.  ಈ ಕುರಿತು ವಸತಿ ನಿಲಯದ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ರೂಮಿನಿಂದ ಎರಡು ಹಾಸಿಗೆಗಳನ್ನು ತಂದು ಬೆಂಕಿ ಹಚ್ಚಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಒಬ್ಬ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ಇದನ್ನು ಪ್ರಶ್ನಿಸಲು ಹೋದ ಕೆಲ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಹೊಡೆದಾಟ ಕೂಡ ನಡೆದಿದೆ ಎಂದು ಹೇಳಲಾಗಿದೆ.

ವಿಷಯ ತಿಳಿದ ಕೂಡಲೇ ತಿಲಕ್‍ಪಾರ್ಕ್ ಠಾಣೆಯ ಎಸ್‍ಐ ರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದಾಗ ವಿದ್ಯಾರ್ಥಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಸಿಪಿಐ ರಾಘವೇಂದ್ರ ಮಾಹಿತಿ ಕಲೆ ಹಾಕಿ 6 ವಿದ್ಯಾರ್ಥಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ವಿಚಾರಣೆ ವೇಳೆ ವಿದ್ಯಾರ್ಥಿ ಯೊಬ್ಬ, ನಾವು ಯಾವುದೇ ದೇಶ ವಿರೋಧಿ ಘೋಷಣೆ ಕೂಗಿಲ್ಲ. ಮೇಲಾಗಿ ನಾನು ಮಿಲ್ಟ್ರಿ ಕುಟುಂಬ ದಿಂದ ಬಂದವನು, ನಮ್ಮ ಕುಟುಂಬ ಸದಸ್ಯರೆಲ್ಲಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನೂ ಕೂಡ ಸೇನೆ ಸೇರುವ ಆಸೆ ಇದೆ. ಹಾಗಾಗಿ ನಾನು ಯಾವುದೇ ಘೋಷಣೆ ಕೂಗಿಲ್ಲ ಎಂದು ತಿಳಿಸಿದ್ದಾನೆ.  ಹಾಸ್ಟೆಲ್ ಭದ್ರತಾ ಸಿಬ್ಬಂದಿಯನ್ನು ವಿಚಾರಣೆ ಗೊಳಪಡಿಸಿ ದಾಗ ವಿದ್ಯಾರ್ಥಿಗಳು ಯಾವುದೇ ಗಲಾಟೆ ಮಾಡಿಲ್ಲ. ಹಿಂದಿಯಲ್ಲಿ ಮಾತ ನಾಡುತ್ತಿದ್ದರು. ನನಗೇನೂ ಗೊತ್ತಿಲ್ಲ ಎಂದು ಉಲ್ಟಾ ಹೊಡೆದಿದ್ದಾನೆ.

ಪ್ರತಿಭಟನೆ:
ವಿದ್ಯಾರ್ಥಿಗಳ ದೇಶ ವಿರೋಧಿ ಘೋಷಣೆ ಖಂಡಿಸಿ ನೂರಾರು ಎಬಿವಿಪಿ ಕಾರ್ಯಕರ್ತರು ಇಂದು ಕಾಲೇಜು ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ದೇಶ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಬೇಕು. ಅಲ್ಲದೆ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ನಿಶ್ಪಕ್ಷಪಾತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin