ಭಕ್ಷಕರಾದ ರಕ್ಷಕರು, ಮಾನಸಿಕ ಅಸ್ವಸ್ಥೆ ಮೇಲೆ ಪೊಲೀಸರಿಂದಲೇ ಅತ್ಯಾಚಾರ ; ಎಎಸ್ಐ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Rape-a

ತುಮಕೂರು. ಜ. 15 : ತುಮಕೂರಿನಲ್ಲಿ ಇತ್ತೀಚಿಗೆ ಮಾನಸಿಕ ಅಸ್ವಸ್ಥೆಯೊಬ್ಬಳ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಠಾಣೆಯ ಎಎಸ್ಐ ಉಮೇಶ್ ಎಂಬುವವರನ್ನು ತುಮಕೂರು ಜಿಲ್ಲಾ ಎಸ್ಪಿ ಇಶಾ ಪಂಥ್ ಅವರು ಅಮಾನತ್ತು ಮಾಡಿದ್ದಾರೆ. ಇತ್ತೀಚಿಗೆ 30 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ ನೆಡೆದಿತ್ತು. ಪ್ರಕರಣದ ಪ್ರಾಥಮಿಕ ತನಿಖೆ ವೇಳೆ ತುಮಕೂರು ಗ್ರಾಮಾಂತರ ಠಾಣೆಯ ಎಎಸ್ಐ ಉಮೇಶ್ ಹಾಗೂ ಪೇದೆ ಕಾರ್ ನಲ್ಲೆ ಮಹಿಳೆ ಮೇಲೆ ಅತ್ಯಾಚಾರವೆಸಗಿ, ನಂತರ ಮನೆಗೆ ತಂದು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತುಮಕೂರು ಗ್ರಾಮಾಂತರ ಠಾಣೆಯ ಇಬ್ಬರು ಪೊಲೀಸರು ಅತ್ಯಾಚಾರ ಎಸಗಿರುವುದಾಗಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ಕೇಂದ್ರ ವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ  ಮಾಹಿತಿ ಪಡೆದಿದ್ದಾರೆ.

ಪ್ರಕರಣ ವಿಚಾರಣೆ ನಡೆಯುತ್ತಿದ್ದು ವರದಿ ಬಂದ ನಂತರ ಉಮೇಶ್ ಆರೋಪ ಸಾಬೀತಾದಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಎಸ್ಪಿ ಇಶಾ ಪಂಥ್ ತಿಳಿಸಿದ್ದಾರೆ. ಕೆಲ ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ಜಾಲ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ ಮಾಹಿಳಾ ಅಧಿಕಾರಿಯೇ ಎಸ್ಪಿಯಾಗಿ ಜಿಲ್ಲೆಗೆ ನೇಮಕವಾಗಿರುವುದರಿಂದ ಈ ಪ್ರಕರಣಗಳಿಗೆ ಮುಕ್ತಿ ಸಿಗಬಹುದು ಎಂದು ಆಶಿಸಲಾಗಿದೆ.

 

Rape-Police

ಏನಿದು ಪ್ರಕರಣ ..? 

ತುಮಕೂರಿನಲ್ಲಿ ನಡೆಯಬಾರದು ನಡೆದು ಹೋಗಿದೇ, ರಕ್ಷಕರೇ ಭಕ್ಷರಾಗಿದ್ದಾರೆ. ಹೆಣ್ಣಿನ ಮಾನ ರಕ್ಷಣೆ ಮಾಡಬೇಕಾದವರು ಮಾನಭಂಗ ಮಾಡಿದ್ದಾರೆ. ತುಮಕೂರಿನಲ್ಲಿ ನಿನ್ನೆ ರಾತ್ರಿ ದೇಶವೇ ತಲೆತಗ್ಗಿಸುವಂತ ಕೃತ್ಯ ನಡೆದು ಹೋಗಿದೆ. ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಪೋಲಿಸರು ಗ್ಯಾಂಗ್ ರೇಪ್ ಮಾಡಿದ್ದಾರೆ. ಹೌದು ತುಮಕೂರಿನ ಜಯನಗರದ ನಿವಾಸಿಯಾದ 33 ವರ್ಷದ ಬುದ್ದಿಮಾಂದ್ಯೆ ಮನೆಯಲ್ಲಿ ಜಗಳವಾಡಿಕೊಂಡುಮನೆಯಿಂದ ಆಚೆ ಹೋಗಿದ್ದಾಳೆ. ಸುಮಾರು ಸಂಜೆ 7 ಗಂಟೆಯಲ್ಲಿ ಮನೆಯಿಂದ ಆಚೆ ಹೋದ ಸಂತ್ರಸ್ತೆ ನಗರದ ಹೊರವಲಯದ ಅಂತ್ರಸ್ರಳ್ಳಿ ಕಡೆ ಹೋಗಿದ್ದಾಳೆ. ಸುಮಾರು 11 ಗಂಟೆ ವೇಳೆ ನೈಟ್ ರೌಂಡ್ ನಲ್ಲಿದ್ದ ಪೊಲೀಸರು ಈಕೆಯನ್ನು ಕಂಡು ವಿಚಾರ ಮಾಡಿದಾಗ ಜಯನಗರದ ನಿವಾಸಿ ಎಂದು ಗೊತ್ತಾಗಿದೆ. ಬಾ ನಾವು ಮನೆಗೆ ಬಿಡುತ್ತೇವೆ ಎಂದು ಜೀಪ್ ಗೆ ಹತ್ತಿಸಿಕೊಂಡಿದ್ದಾರೆ. ನಂತರ ನಡೆದ್ದೂ ಮಾತ್ರ ಅಮಾನುಷ.

ಹೌದು ಜೀಪ್ನಲ್ಲಿ ಹತ್ತಿಸಿಕೊಂಡು ಇಬ್ಬರು ಆಕೆಯ ಮೇಲೆರಗಿ ಮೃಗದಂತೆ ವರ್ತಿಸಿ ರೇಪ್ ಮಾಡಿದ್ದಾರೆ. ನಂತರ ಆಕೆಯ ಮನೆಗೆ ಕರೆ ಮಾಡಿ ನಿಮ್ಮ ಮನೆ ಎಲ್ಲಿ ಬರುತ್ತದೆ ಎಂಧು ಕೇಳಿ ಜಯನಗರದ ಮನೆಗೆ ತಂದು ಬಿಟ್ಟಿದ್ದಾರೆ, ಯಾವಗ ಜೀಪ್ ನಿಂದ ಕೆಳಗೆ ಇಳಿದ ಸಂತ್ರಸ್ಥೆ ಇವರು ನನ್ನನು ರೇಪ್ ಮಾಡಿದರು ಎಂದು ಕೂಗಿದ್ದಾಳೆ. ಇದನ್ನ ಕೇಳಿದ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಷ್ಟರಲ್ಲಿ ಸುಮಾರು ಬೆಳಗಿನ ಜಾವ 4 30 ಆಗಿತ್ತು

ನಂತರ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ಥೆಯ ತಾಯಿ ತಮ್ಮ ದೂರು ನೀಡಿದ್ದಾರೆ. ಈ ಸಂಬಂಧ ಎಸ್ಪಿ ಇಶಾಪಂತ್ ತನಿಕೆ ನಡೆಸುತ್ತಿದ್ದು, ಎಎಸ್ಐ ಮತ್ತು ಡ್ರೈವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಜಿಲ್ಲಾ ಸರ್ಕಾರಿ ಅಸ್ಪತ್ರೆಯಲ್ಲಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ನೆಡೆಸಿ ಅತ್ಯಾಚಾರ ಎಸಗಿರುವದನ್ನು ಖಚಿತ ಪಡಿಸಿದ್ದಾರೆ ಇದು ಪೋಲಿಸ್ ಇಲಾಖೆಯ ಒಬ್ಬ ಸಹಾಯಕ ಸಬ್ ಇನ್ಸೆಸ್ಪೆಕ್ಟರ್ ನೆಡೆಸಿರುವುದು ಹಾಗೂ ಗೃಹ ಸಚಿವರ ಕ್ಷೇತ್ರದಲ್ಲಿ ಈ ಘಟನೆ ನೆಡೆದಿರುವುದು ಇಲಾಖೆ ತೀವ್ರ ಮುಖ ಭಂಗವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin