ತುಮುಲ್‍ವತಿಯಿಂದ 6 ಶುದ್ದ ನೀರಿನ ಘಟಕ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

huliyaru

ಹುಳಿಯಾರು,ಆ.22- ತುಮಕೂರು ಹಾಲು ಒಕ್ಕೂಟದಿಂದ ಚಿಕ್ಕನಾಯ್ಕನಹಳ್ಳಿ ತಾಲೂಕಿನಲ್ಲಿ 6 ಶುದ್ಧ ನೀರಿನ ಘಟಕ ಸ್ಥಾಪಿಸುತ್ತಿರುವುದಾಗಿ ತುಮುಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಹಳೆಮನೆಶಿವನಂಜಪ್ಪ ತಿಳಿಸಿದರು.  ಹುಳಿಯಾರು ಸಮೀಪದ ಗುರುವಾಪುರ ಡೇರಿಯಲ್ಲಿ ನಡೆದ 2015-16 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.  ನೀರಿನಿಂದ ಇಂದು ಅನೇಕ ಸಾಂಕ್ರಾಮಿಕ ರೋಗಳು ಹರಡುತ್ತಿದ್ದು, ಶುದ್ದ ನೀರು ಕುಡಿಯಲು ಇಂದು ಎಲ್ಲರೂ ಆದ್ಯತೆ ಕೊಡಬೇಕಿದೆ. ತುಮುಲ್‍ನಿಂದ 1.5 ಲಕ್ಷ ರೂ. ವಂತಿಕೆ ಕೊಟ್ಟು ಸರ್ಕಾರದ ಸಹಕಾರದೊಂದಿಗೆ ಶುದ್ಧ ನೀರಿನ ಘಟಕ ಸ್ಥಾಪಿಸುತ್ತಿರುವುದಾಗಿ ಅವರು ತಿಳಿಸಿದರು.ಡೇರಿ ಅಧ್ಯಕ್ಷ ಜಿ.ಎಸ್.ಮಹದೇವಯ್ಯ, ಸಹಾಯಕ ವ್ಯವಸ್ಥಾಪಕ ಯರಗುಂಟಪ್ಪ, ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಿ.ರಾಜು, ಆರ್.ವೈ.ಸುನಿಲ್, ಗ್ರಾಪಂ ಸದಸ್ಯ ಶಿವಕುಮಾರ್, ಡೇರಿ ನಿರ್ದೇಶಕರಾದ ಜಿ.ಡಿ.ಚಂದ್ರಯ್ಯ, ಬಿ.ಎಲ್.ರೇಣುಕಪ್ರಸಾದ್, ಜಿ.ಕೆ.ಕೃಷಮೂರ್ತಿ, ಜಿ.ಆರ್.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin