ತೃತೀಯ ರಂಗದ ಅಸ್ತಿತ್ವ ದೇವರಿಗೇ ಗೊತ್ತು : ಎಚ್.ಡಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಬೆಂಗಳೂರು,ಆ.25-ದೇಶದಲ್ಲಿ ತೃತೀಯ ರಂಗದ ಅಸ್ತಿತ್ವ ಮುಂದೆ ಏನಾಗಲಿದೆ ಎಂಬುದು ದೇವರಿಗೆ ಗೊತ್ತು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.   ಒರಿಸ್ಸಾದ ಆರೋಗ್ಯ ಸಚಿವ ಅಥುನ್ ಸಭ್ಯಸಾಚಿ ನಾಯಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಣವ್ ಪ್ರತಾಪ್ ಅವರು ಪದ್ಮನಾಭನಗರದ ನಿವಾಸದಲ್ಲಿ ಗೌಡರನ್ನು ಭೇಟಿಯಾಗಿ ಒರಿಸ್ಸಾ ರಾಜ್ಯ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಜನ್ಮ ಶತಮಾನೋತ್ಸವಕ್ಕೆ ಆಹ್ವಾನ ನೀಡಿದರು.   ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ರಾಜ್ಯದಲ್ಲಿರುವ 21 ಸ್ಥಾನಗಳ ಪೈಕಿ 20 ಸ್ಥಾನದಲ್ಲಿ ಚುನಾಯಿತರಾಗಿದ್ದಾರೆ ಎನ್ನುವ ಮೂಲಕ ಮತ್ತೆ ತೃತೀಯ ರಂಗಕ್ಕೆ ಚಾಲನೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.

ಒರಿಸ್ಸಾ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಹುಟ್ಟುಹಬ್ಬ ಆಚರಣೆಗೆ ಆಹ್ವಾನ ನೀಡಲು ಸಚಿವರಿಬ್ಬರು ತಮ್ಮನ್ನು ಭೇಟಿಯಾಗಿದ್ದರು. ಅಲ್ಲಿನ ಮುಖ್ಯಮಂತ್ರಿ ಪರವಾಗಿ ತಮಗೆ ಆಹ್ವಾನ ನೀಡಲು ಸಚಿವರಿಬ್ಬರು ಬಂದಿರುವುದು ಸಂತೋಷವಾಗಿದೆ ಎಂದರು.   ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಾಳೆ ಬೆಂಗಳೂರಿಗೆ ಆಗಮಿಸಲಿದ್ದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ಹೇಳಿದ ಗೌಡರು, ಬಿಜು ಪಟ್ನಾಯಕ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin