ತೆರಿಗೆ ಸಂಗ್ರಹದಲ್ಲಿ ಹಿಂದಿನ ವರ್ಷದ ಸರಾಸರಿಗಿಂತ ಶೇ.11ರಷ್ಟು ಹೆಚ್ಚುವರಿ ಸಾಧನೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Sessopn-Siddaramiha-01

ಬೆಳಗಾವಿ, ನ.29– ಕಳೆದ ವರ್ಷದಂತೆ ಈ ವರ್ಷವೂ ಬಜೆಟ್‍ನ ಪೂರ್ಣ ಅನುದಾನವನ್ನು ಖರ್ಚು ಮಾಡಲಾಗುವುದು ಮತ್ತು ತೆರಿಗೆ ಸಂಗ್ರಹದಲ್ಲಿ ಹಿಂದಿನ ವರ್ಷದ ಸರಾಸರಿಗಿಂತ ಶೇ.11ರಷ್ಟು ಹೆಚ್ಚುವರಿ ಸಾಧನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬೈಲಹೊಂಗಲ ಕ್ಷೇತ್ರದ ಶಾಸಕ ವಿಶ್ವನಾಥ ಈ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2016-17ನೇ ಸಾಲಿನಲ್ಲಿ 1.63 ಲಕ್ಷ ಬಜೆಟ್ ಮಂಡಿಸಿದೆ. ಇದರಲ್ಲಿ ಮಹಾಲೆಕ್ಕಪಾಲಕರ ವರದಿಯಂತೆ ಸೆಪ್ಟೆಂಬರ್ ಅಂತ್ಯದವರೆಗೆ 63 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸಾಮಾನ್ಯವಾಗಿ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಹಣ ಖರ್ಚಾಗಲಿದೆ. ಕಳೆದ ವರ್ಷ ಬಜೆಟ್‍ನಲ್ಲಿ ಒದಗಿಸಿದ್ದ ಪೂರ್ತಿ ಹಣವನ್ನು ಖರ್ಚು ಮಾಡಲಾಗಿತ್ತು. ಈ ವರ್ಷವೂ ಅದೇ ರೀತಿ ಹಣವನ್ನು ಬಳಕೆ ಮಾಡಲಾಗುತ್ತದೆ. ಈವರೆಗೂ ಶೇ.39.8ರಷ್ಟು ಖರ್ಚಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ವರ್ಷದಲ್ಲಿ ಮೂರು ಕಂತುಗಳ ಹಣವನ್ನು ಆಯಾ ಇಲಾಖೆ ಮುಖ್ಯಸ್ಥರೇ ಖರ್ಚು ಮಾಡಿಕೊಳ್ಳಬಹುದು. ಕೊನೆಯ ಕಂತನ್ನು ಮಾತ್ರ ಸಾಧಕ-ಬಾಧಕಗಳನ್ನು ಪರಿಶೀಲಿ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು. ಸೆಪ್ಟೆಂಬರ್ ಅಂತ್ಯದಲ್ಲಿ ರಾಜಸ್ವದಲ್ಲಿ 39761.99 ಕೋಟಿ ಸಂಗ್ರಹವಾಗಿದ್ದು, 83864ಒಟ್ಟು ಸಂಗ್ರಹದ ಗುರಿಯಲ್ಲಿ ಶೇ.47.40ರಷ್ಟು ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು. ಇಲಾಖಾವಾರು ತೆರಿಗೆ ಸಂಗ್ರಹದ ಪ್ರಮಾಣವನ್ನು ಸದನಕ್ಕೆ ಮಾಹಿತಿ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin