ತೇಜಸ್‌ಗೌಡ ಅಪಹರಣ ಪ್ರಕರಣ : ಜಾರ್ಜ್‌ಶೀಟ್‌ನಲ್ಲಿ DySP ಕಲ್ಲಪ್ಪ ಹಂಡಿಬಾಗ್ ಹೆಸರಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

kallapaa
ಚಿಕ್ಕ ಮಗಳೂರು :ಅ,5- ತೇಜಸ್‌ಗೌಡ ಅಪಹರಣ ಪ್ರಕರಣದಲ್ಲಿ ಜೆಎಂಎಫ್ಸಿ ಕೋರ್ಟ್‌ಗೆ ಸಿಐಡಿ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಹೆಸರು ಇಲ್ಲದಿರುವುದು ತಿಳಿದುಬಂದಿದೆ . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಫ್ಸಿ ಕೋರ್ಟ್‌ಗೆ ಸಿಐಡಿ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಒಟ್ಟು 13 ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಮೂರನೇ ಆರೋಪಿಯಾದ ಪ್ರವೀಣ್ ಖಾಂಡ್ಯ ತಲೆಮರೆಸಿಕೊಂಡಿದ್ದು ,ಆತನ ಸಿಕ್ಕ ಮೇಲೆ ವಿಚಾರಣೆಗೆ ಒಳಪಡಿಸಿ ಹಂಡಿಬಾಗ್ ನ ಪಾತ್ರವಿರುವ ಕುರಿತು ಖಚಿತ ಪಡಿಸಿಕೊಂಡ ನಂತರವಷ್ಟೆ ಜಾರ್ಜ್ ಶೀಟ್ ನಲ್ಲಿ ಹಂಡಿಬಾಗ್ ಅವರ ಹೆಸರು ಉಲ್ಲೇಖಿಸಲಾಗುವುದು ಎಂದು ಸಿಐಡಿ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್ಲಾ 13 ಆರೋಪಿಗಳನ್ನು ಅಕ್ಟೋಬರ್ 13 ರಂದು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಐಡಿ ವರದಿಯಲ್ಲಿ ತಿಳಿಸಿದೆ .

► Follow us on –  Facebook / Twitter  / Google+

Facebook Comments

Sri Raghav

Admin