ತೇಜ್‍ರಾಜ್ ಕೊಟ್ಟ ದೂರುಗಳನ್ನು ನಿರ್ಲಕ್ಷಿಸಿದ್ದೇ ಲೋಕಾಯುಕ್ತರಿಗೆ ಮುಳುವಾಯಿತೆ..?

ಈ ಸುದ್ದಿಯನ್ನು ಶೇರ್ ಮಾಡಿ

Lokayukta--01-Stabbed
ಬೆಂಗಳೂರು,ಮಾ.8- ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಆರೋಪಿ ತೇಜ್‍ರಾಜ್ ಶರ್ಮನನ್ನು ಕೇಂದ್ರ ವಿಭಾಗದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ದ ಸಾಕ್ಷಾಧಾರಗಳ ಸಹಿತ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸರಿಯಾಗಿ ತನಿಖೆ ಮಾಡಿಲ್ಲ ಎಂದು ಬೇಸರವಾಗಿತ್ತು. ನ್ಯಾಯಕ್ಕಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದೆ. ಆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಈ ಘಟನೆ ನಡೆದು ಹೋಗಿದೆ ಎಂದು ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಮೂಲತಃ ರಾಜಸ್ಥಾನದವನಾದ ಈತ ತುಮಕೂರಿನಲ್ಲಿ ವಾಸವಾಗಿದ್ದ. ಪೀಠೋಪಕರಣ ವ್ಯಾಪಾರಿಯಾದ ಆರೋಪಿ ಶರ್ಮ ಕೆಲವು ಅಧಿಕಾರಿಗಳ ವಿರುದ್ದ ಅವ್ಯವಹಾರ ಆರೋಪ ಮಾಡಿ ಲೋಕಾಯುಕ್ತಕ್ಕೆ ಕಳೆದ ವರ್ಷ ಪ್ರತ್ಯೇಕವಾಗಿ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ತುಮಕೂರಿನಿಂದ ಬೆಂಗಳೂರಿಗೆ ಬರಲು ಮನೆಯಿಂದ ಹೊರಡುವಾಗಲೇ ಚಾಕು ಇಟ್ಟುಕೊಂಡು ಬಂದಿದ್ದಾಗಿ ಆರೋಪಿ ಹೇಳಿದ್ದಾನೆ.

Facebook Comments

Sri Raghav

Admin