ತೈವಾನ್‍ನಲ್ಲೊಂದು ರೆಡಿಮೇಡ್ ಟೆಂಪಲ್ ಫ್ಯಾಕ್ಟರಿ !

ಈ ಸುದ್ದಿಯನ್ನು ಶೇರ್ ಮಾಡಿ
 ತೈವಾನ್‍ನಲ್ಲೊಂದು ರೆಡಿಮೇಡ್ ಟೆಂಪಲ್ ಫ್ಯಾಕ್ಟರಿ ! ಇಂದು ರೆಡಿಮೇಡ್ ಯುಗ. ಎಲ್ಲವೂ ಸಿದ್ದ-ಸರ್ವಸನ್ನದ್ಧ. ಇದಕ್ಕೆ ಪೂರಕವಾಗಿ ತೈವಾನ್‍ನಲ್ಲಿ ದೇವರುಗಳ ಪ್ರತಿಮೆಗಳು ಮತ್ತು ಸಿದ್ದ ಮಂದಿರಗಳನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ಕಾರ್ಖಾನೆಯೊಂದು ನಿರತವಾಗಿದೆ. ತೈವಾನ್ ದಕ್ಷಿಣ ಭಾಗದ ಪಿಂಗ್‍ಟಂಗ್ ಕೌಂಟಿಯಲ್ಲಿರುವ ಲಿನ್ ಫು-ಚುನ್ಸ್ ಕಾರ್ಖಾನೆಯ ನೌಕರರು ವಿವಿಧ ಗಾತ್ರದ ದೇವಾಲಯಗಳು, ಮಂದಿರಗಳು ನಿರ್ಮಾಣವಾಗುತ್ತವೆ. ತೈವಾನ್‍ನಲ್ಲಿರುವ ಕೆಲವು ಕಂಪನಿಗಳು ಸಾಂಪ್ರದಾಯಿಕ ಇಟ್ಟಿಗೆಗಳು ಮತ್ತು ಸಿಮೆಂಟ್‍ನೊಂದಿಗೆ ದೇಗುಲಗಳನ್ನು ನಿರ್ಮಿಸಲು ಸುಮಾರು ಆರು ತಿಂಗಳುಗಳ ಕಾಲ ತೆಗೆದುಕೊಂಡರೆ, 78 ವರ್ಷದ ಲಿನ್ ಅವರ ಕಾರ್ಖಾನೆಯಲ್ಲಿ ಕೇವಲ ಆರು ವಾರಗಳಲ್ಲೇ ರೆಡಿಮೇಡ್ ಕಾಂಕ್ರೀಟ್ ಟೆಂಪಲ್‍ಗಳು ನಿರ್ಮಾಣವಾಗುತ್ತವೆ. ದೊಡ್ಡ ಮೌಲ್ಡಿಂಗ್‍ನಲ್ಲಿ ಕಾಂಕ್ರೀಟ್ ಸುರಿದು ಒಣಗಿಸಿ, ಗಾಢ ಬಣ್ಣಗಳಿಂದ ಸಾಂಪ್ರದಾಯಿಕ ಆಭರಣಗಳಿಗೆ ಬಣ ಬಳಿದು ಈ ಸಿದ್ದ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತದೆ. ಬೇರೆ ರೀತಿಯ ಗುಡಿ ಗೋಪುರಗಳಿಗೆ ಹೋಲಿಸದರೆ ಇವುಗಳ ಬೆಲೆ ಶೇಕಡ 40ರಷ್ಟು ಕಡಿಮೆ ಎಂದು ಲಿನ್ ವಿವರಿಸುತ್ತಾರೆ. ತಮ್ಮ ದೊಡ್ಡ ಒಳಾಂಗಣ ಕಾರ್ಖಾನೆಯಲ್ಲಿ ಸುಮಾರು 100 ಮಂದಿ ದಿನಕ್ಕೆ 20 ಮಂದಿರಗಳನ್ನು ನಿರ್ಮಿಸುತ್ತಾರೆ. ಗ್ರಾಹಕರ ಬೇಡಿಕೆ, ವಿವಿಧ ಗಾತ್ರಗಳ ದೇಗುಲ ಮತ್ತು ದೇವರುಗಳ ಆಧಾರದ ಮೇಲೆ ಇಲ್ಲಿ ಇವುಗಳನ್ನು ನಿರ್ಮಿಸಲಾಗುತ್ತದೆ. ನೆರೆಹೊರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ ಎನ್ನುತ್ತಾರೆ ಲಿನ್.  ತೈವಾನ್ ದೇವಾಲಯಗಳಲ್ಲಿ ಡ್ರಾಗನ್‍ಗಳು ಮತ್ತು ಫೀನಿಕ್ಸ್‍ಗಳನ್ನು ವಿನ್ಯಾಸಗೊಳಿಸಿ ಬಣ್ಣ ತುಂಬುತ್ತಿದ್ದ ಲಿನ್ 1993ರಿಂದ ಕಾಂಕ್ರೀಟ್ ಮೌಲ್ಡಿಂಗ್ ಟೆಂಪಲ್‍ಗಳ ನಿರ್ಮಾಣವನ್ನು ಆರಂಭಿಸಿದ್ದು, ಭಕ್ತರ ಮನೆ ಬಾಗಿಲಿಗೆ ದೇವರು ಮತ್ತು ದೇವಸ್ಥಾನಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಸಿದ್ದವಾದ ರೆಡಿಮೇಡ್ ದೇವಾಲಯಗಳನ್ನು ವಾಹನಗಳ ಮೂಲಕ ಗ್ರಾಹಕರ ಮನೆಗಳಿಗೆ ಪೂರೈಸಲಾಗುತ್ತದೆ.  1,250 ರಿಂದ 62,500 ಡಾಲರ್‍ಗಳವರೆಗೆ ಗಾತ್ರಕ್ಕೆ ಅನುಗುಣವಾಗಿ ಈ ದೇವಸ್ಥಾನಗಳು ಮಾರಾಟವಾಗುತ್ತಿದೆ. ಇದು ಮನುಷ್ಯನ ಕಲೆ ; ದೇವರ ಲೀಲೆ.

ಇಂದು ರೆಡಿಮೇಡ್ ಯುಗ. ಎಲ್ಲವೂ ಸಿದ್ದ-ಸರ್ವಸನ್ನದ್ಧ. ಇದಕ್ಕೆ ಪೂರಕವಾಗಿ ತೈವಾನ್‍ನಲ್ಲಿ ದೇವರುಗಳ ಪ್ರತಿಮೆಗಳು ಮತ್ತು ಸಿದ್ದ ಮಂದಿರಗಳನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ಕಾರ್ಖಾನೆಯೊಂದು ನಿರತವಾಗಿದೆ. ತೈವಾನ್ ದಕ್ಷಿಣ ಭಾಗದ ಪಿಂಗ್‍ಟಂಗ್ ಕೌಂಟಿಯಲ್ಲಿರುವ ಲಿನ್ ಫು-ಚುನ್ಸ್ ಕಾರ್ಖಾನೆಯ ನೌಕರರು ವಿವಿಧ ಗಾತ್ರದ ದೇವಾಲಯಗಳು, ಮಂದಿರಗಳು ನಿರ್ಮಾಣವಾಗುತ್ತವೆ.

ತೈವಾನ್‍ನಲ್ಲಿರುವ ಕೆಲವು ಕಂಪನಿಗಳು ಸಾಂಪ್ರದಾಯಿಕ ಇಟ್ಟಿಗೆಗಳು ಮತ್ತು ಸಿಮೆಂಟ್‍ನೊಂದಿಗೆ ದೇಗುಲಗಳನ್ನು ನಿರ್ಮಿಸಲು ಸುಮಾರು ಆರು ತಿಂಗಳುಗಳ ಕಾಲ ತೆಗೆದುಕೊಂಡರೆ, 78 ವರ್ಷದ ಲಿನ್ ಅವರ ಕಾರ್ಖಾನೆಯಲ್ಲಿ ಕೇವಲ ಆರು ವಾರಗಳಲ್ಲೇ ರೆಡಿಮೇಡ್ ಕಾಂಕ್ರೀಟ್ ಟೆಂಪಲ್‍ಗಳು ನಿರ್ಮಾಣವಾಗುತ್ತವೆ.  ದೊಡ್ಡ ಮೌಲ್ಡಿಂಗ್‍ನಲ್ಲಿ ಕಾಂಕ್ರೀಟ್ ಸುರಿದು ಒಣಗಿಸಿ, ಗಾಢ ಬಣ್ಣಗಳಿಂದ ಸಾಂಪ್ರದಾಯಿಕ ಆಭರಣಗಳಿಗೆ ಬಣ ಬಳಿದು ಈ ಸಿದ್ದ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತದೆ. ಬೇರೆ ರೀತಿಯ ಗುಡಿ ಗೋಪುರಗಳಿಗೆ ಹೋಲಿಸದರೆ ಇವುಗಳ ಬೆಲೆ ಶೇಕಡ 40ರಷ್ಟು ಕಡಿಮೆ ಎಂದು ಲಿನ್ ವಿವರಿಸುತ್ತಾರೆ. ತಮ್ಮ ದೊಡ್ಡ ಒಳಾಂಗಣ ಕಾರ್ಖಾನೆಯಲ್ಲಿ ಸುಮಾರು 100 ಮಂದಿ ದಿನಕ್ಕೆ 20 ಮಂದಿರಗಳನ್ನು ನಿರ್ಮಿಸುತ್ತಾರೆ. ಗ್ರಾಹಕರ ಬೇಡಿಕೆ, ವಿವಿಧ ಗಾತ್ರಗಳ ದೇಗುಲ ಮತ್ತು ದೇವರುಗಳ ಆಧಾರದ ಮೇಲೆ ಇಲ್ಲಿ ಇವುಗಳನ್ನು ನಿರ್ಮಿಸಲಾಗುತ್ತದೆ. ನೆರೆಹೊರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ ಎನ್ನುತ್ತಾರೆ ಲಿನ್.

ತೈವಾನ್ ದೇವಾಲಯಗಳಲ್ಲಿ ಡ್ರಾಗನ್‍ಗಳು ಮತ್ತು ಫೀನಿಕ್ಸ್‍ಗಳನ್ನು ವಿನ್ಯಾಸಗೊಳಿಸಿ ಬಣ್ಣ ತುಂಬುತ್ತಿದ್ದ ಲಿನ್ 1993ರಿಂದ ಕಾಂಕ್ರೀಟ್ ಮೌಲ್ಡಿಂಗ್ ಟೆಂಪಲ್‍ಗಳ ನಿರ್ಮಾಣವನ್ನು ಆರಂಭಿಸಿದ್ದು, ಭಕ್ತರ ಮನೆ ಬಾಗಿಲಿಗೆ ದೇವರು ಮತ್ತು ದೇವಸ್ಥಾನಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಸಿದ್ದವಾದ ರೆಡಿಮೇಡ್ ದೇವಾಲಯಗಳನ್ನು ವಾಹನಗಳ ಮೂಲಕ ಗ್ರಾಹಕರ ಮನೆಗಳಿಗೆ ಪೂರೈಸಲಾಗುತ್ತದೆ. 1,250 ರಿಂದ 62,500 ಡಾಲರ್‍ಗಳವರೆಗೆ ಗಾತ್ರಕ್ಕೆ ಅನುಗುಣವಾಗಿ ಈ ದೇವಸ್ಥಾನಗಳು ಮಾರಾಟವಾಗುತ್ತಿದೆ. ಇದು ಮನುಷ್ಯನ ಕಲೆ ; ದೇವರ ಲೀಲೆ.

Facebook Comments

Sri Raghav

Admin