ತ್ರಿವರ್ಣಧ್ವಜದ ಡೋರ್‍ಮ್ಯಾಟ್‍ ಮಾರಾಟ : ಪ್ರತಿಭಟನೆಗೆ ಬೆಚ್ಚಿ ತಪ್ಪು ತಿದ್ದಿಕೊಂಡ ಅಮೆಜಾನ್

ಈ ಸುದ್ದಿಯನ್ನು ಶೇರ್ ಮಾಡಿ

Amaezon

ವಾಷಿಂಗ್ಟನ್, ಜ.12-ಭಾರತದ ತ್ರಿವರ್ಣ ಧ್ವಜ ಚಿತ್ರವಿರುವ ಡೋರ್‍ಮ್ಯಾಟ್‍ಗಳನ್ನು (ಬಾಗಿಲ ನೆಲಹಾಸು) ಆನ್‍ಲೈನ್ ಮಾರಾಟಕ್ಕಿಟ್ಟು ಅಪಪ್ರಚಾರ ಎಸಗಿದ್ದ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಬೆಚ್ಚಿ ತನ್ನ ಪ್ರಮಾದವನ್ನು ಸರಿಪಡಿಸಿಕೊಂಡಿದೆ. ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಜಾಲದಿಂದ ಈ ಜಾಹೀರಾತನ್ನು ತೆಗೆದು ಹಾಕಿದೆ. ಸಿಯಾಟಲ್‍ನಲ್ಲಿರುವ ಅಮೆಜಾನ್ ಕೇಂದ್ರ ಕಚೇರಿಯ ವಕ್ತಾರರೊಬ್ಬರು ಈ ಕುರಿತು ಹೇಳಿಕೆ ನೀಡಿ, ಅಚಾತುರ್ಯದಿಂದ ಪ್ರಮಾದವಾಗಿದೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಇನ್ನು ಮುಂದೆ ವೆಬ್‍ಸೈಟ್‍ನಲ್ಲಿ ಈ ಮ್ಯಾಟ್‍ಗಳು ಮಾರಾಟವಾಗುವುದಿಲ್ಲ. ಈ ಕುರಿತ ಜಾಹೀರಾತನ್ನು ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ವೆಬ್‍ಸೈಟ್‍ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸಿರುವ ಬೃಹತ್ ಇ-ಮಾರಾಟ ಕಂಪನಿಯಾದ ಅಮೆಜಾನ್ ತಾನು ಮಾಡಿದ ತಪ್ಪಿಗೆ ಈ ಕೂಡಲೇ ಬೇಷರತ್ ಕ್ಷಮೆ ಕೋರಬೇಕೆಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದರು. ತಕ್ಷಣ ನಿಶ್ಯರ್ಥ ಕ್ಷಮೆ ಯಾಚಿಸದಿದ್ದರೆ ಕಂಪನಿ ಯಾವುದೇ ಆಧಿಕಾರಿಗಳಿಗೆ ವೀಸಾ ನೀಡುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದರು.  ಅತುಲ್ ಭೋಬಿ ಎಂಬುವರು ಟ್ವೀಟ್ ಮಾಡಿ, ಅಮೆಜಾನ್ ಕೆನಡಾ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ತ್ರಿವರ್ಣ ಧ್ವಜದ ಡೋರ್‍ಮ್ಯಾಟ್‍ಗಳನ್ನು ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಟ್ವೀಟರ್‍ನಲ್ಲಿ ಸುಷ್ಮಾ ಅವರನ್ನು ಒತ್ತಾಯಿಸಿದ್ದರು.

ಮೂತ್ರಪಿಂಡ ಕಸಿಗೆ ಒಳಗಾಗಿ ದೆಹಲಿಯ ವಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸುಷ್ಮಾ ಸ್ವರಾಜ್ ತಕ್ಷಣ ಪ್ರತಿಕ್ರಿಯೆ ನೀಡಿ, ಅಮೆಜಾನ್ ಕೂಡಲೇ ಬೇಷರತ್ ಕ್ಷಮೆ ಕೋರಬೇಕು. ಭಾರತದ ರಾಷ್ಟ್ರಧ್ವಜವನ್ನು ಅಪಮಾನ ಮಾಡುವಂಥ ಎಲ್ಲ ಉತ್ಪನ್ನಗಳನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ಅಮೆಜಾನ್‍ನ ಯಾವುದೇ ಪ್ರತಿನಿಧಿಗೆ ಭಾರತ ವೀಸಾ ನೀಡುವುದಿಲ್ಲ. ಈಗಾಗಲೇ ನೀಡಿದ್ದನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin