ತ್ರಿವಳಿ ತಲಾಕ್ ಬೇಡ ಎಂದು ಮಹಿಳೆ ಷರತ್ತುಹಾಕಬಹುದೆ..? : ಸುಪ್ರೀಂ ಪ್ರಶ್ನೆ
ನವದೆಹಲಿ, ಮೇ 17-ವಿವಾಹದ ಸಂದರ್ಭದಲ್ಲಿ ತ್ರಿವಳಿ ತಲಾಖ್ ಬೇಡ ಎನ್ನಲು ಮಹಿಳೆಗೆ ಆಯ್ಕೆ ನೀಡಬಹುದೇ ಎಂದು ಸುಪ್ರೀಂಕೋರ್ಟ್ ಇಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು(ಎಐಎಂಪಿಎಲ್ಬಿ) ಪ್ರಶ್ನಿಸಿದೆ. ನಿಖ್ನಮ್ (ಇಸ್ಲಾಮಿಕ್ ವಿವಾಹ ಕರಾರು) ಅನುಷ್ಠಾನದ ವೇಳೆ ಅಂದರೆ ಮದುವೆಯಾಗುವಾಗ ಈ ಷರತ್ತನ್ನು ಸೇರಿಸುವಂತೆ ಎಲ್ಲ ಖಾಜಿಗಳನ್ನು (ಮುಸ್ಲಿಂ ಧರ್ಮಗುರುಗಳು) ಕೇಳಲು ಅವಕಾಶ ಇದೆಯೇ ಎಂದೂ ಕೂಡ ಸರ್ವೋಚ್ಚ ನ್ಯಾಯಾಲಯ ಪ್ರಶ್ನೆ ಹಾಕಿದೆ.
ನಿಖ್ನಮ್ ಕಾರ್ಯಗತದ ವೇಳೆ ತ್ರಿವಳಿ ತಲಾಖ್ ಬೇಡ ಎಂದು ಹೇಳಲು ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಲು ಸಾಧ್ಯವಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಕೇಳಿದೆ. ತ್ರಿವಳಿ ತಲಾಖ್ ಸಿಂಧುತ್ವ ಪ್ರಶ್ನೆ ಕುರಿತು ಇಂದು ಐದನೇ ದಿನದ ವಿಚಾರಣೆ ಮುಂದುವರಿಸಿದ ಪೀಠವು, ಈ ಬಗ್ಗೆ ಎಐಎಂಪಿಎಲ್ಬಿ ಪರ ವಕಾಲತ್ತು ವಹಿಸಿರುವ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಾಲ್ರನ್ನು ಪ್ರಶ್ನಿಸಿತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS