ತ್ರಿಶೂಲಿ ನದಿಗೆ ಬಸ್ ಬಿದ್ದು 21 ಮಂದಿ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Trishul

ಕಠ್ಮಂಡು, ಆ.26-ಹಿಮಾಲಯ ರಾಷ್ಟ್ರ ನೇಪಾಳದ ಚಿಟ್ವಾನ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಸ್ಸೊಂದು ನದಿಗೆ ಉರುಳಿಬಿದ್ದು ಕನಿಷ್ಠ 21 ಜನ ಮತಪಟ್ಟು, ಇತರ 17 ಮಂದಿ ಗಾಯಗೊಂಡಿದ್ದಾರೆ.
ನೇಪಾಳದ ಕೌಟ್ಹಟ್ ಜಿಲ್ಲೆಯ ಗೌರ್ನಿಂದ ಪೋಕಾರಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಹೆದ್ದಾರಿಯಿಂದ ಉರುಳಿ 100 ಮೀಟರ್ ಅಳದಲ್ಲಿದ್ದ ತ್ರಿಶೂಲಿ ನದಿಗೆ ಬಿತ್ತು. ಈ ದುರಂತದಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.ಇತರ 17 ಜನರಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.  ನದಿಯ ನೀರಿನಲ್ಲು ಮುಳುಗಡೆಯಾಗಿದ್ದ ಬಸ್ನ ಅವಶೇಷಗಳಿಂದ ಪೊಲೀಸರು ಮತ್ತು ಸ್ಥಳೀಯರು ಗಾಯಾಳುಗಳನ್ನು ಹೊರಗೆಳೆದು ರಕ್ಷಿಸಿದರು. ಗಾಯಾಳುಗಳು ಭರತ್ಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin