ತ.ನಾಡಿನಲ್ಲಿ ಮರಳು ಗಣಿಗಾರಿಕೆ ಬಂದ್ : ಕರ್ನಾಟಕದ ಮೇಲೆ ಎಫೆಕ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sand-Mining--01

ಮದುರೈ, ಮೇ 6-ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಎಲ್ಲ ಮರಳು ಗಣಿಗಾರಿಕೆಯನ್ನು ಮೂರು ವರ್ಷಗಳ ಕಾಲ ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಕರ್ನಾಟಕದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.  ಮುಂದಿನ ಮೂರು ವರ್ಷಗಳವರೆಗೆ ರಾಜ್ಯಾದ್ಯಂತ ಮರಳು ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು. ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನದಿ ದಂಡೆಗಳು ಮತ್ತು ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಇದರಿಂದ ರಾಜ್ಯದಲ್ಲಿ ನದಿಗಳ ನೀರು ಪ್ರವಹಿಸುವಿಕೆ ಕ್ಷೀಣಿಸಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮದುರೈನಲ್ಲಿ ತಿಳಿಸಿದ್ದಾರೆ.  ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಮರಳುಗಣಿಗಾರಿಕೆ ಬಂದ್ ಆಗುವುದರಿಂದ ಕಟ್ಟಡ ನಿರ್ಮಾತೃಗಳು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಅವರು ಹೇಳಿದ್ದಾರೆ.ಕರ್ನಾಟಕ ಮೇಲೆ ಪರಿಣಾಮ :

ತಮಿಳುನಾಡು ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆ ರಾಜ್ಯದಲ್ಲಿ ಇದರಿಂದಾಗಿ ಮರಳು ಅಭಾವ ಸೃಷ್ಟಿಯಾಗಲಿದ್ದು, ಕರ್ನಾಟಕದ ಮರಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಸಹಜವಾಗಿ ಗಡಿ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆ ಮತ್ತು ಕಳ್ಳಸಾಗಣೆಗೆ ಎಡೆ ಮಾಡಿಕೊಡಲಿದೆ. ಈಗಾಗಲೇ ಕರ್ನಾಟಕದಲ್ಲಿ ಮರಳು ಮಾಫಿಯಾ ಸಕ್ರಿಯವಾಗಿದ್ದು, ತಮಿಳುನಾಡಿನಿಂದ ಮರಳಿಗೆ ಬೇಡಿಕೆ ಹೆಚ್ಚಾದರೆ ಅಕ್ರಮ ಚಟುವಟಿಕೆಗಳನ್ನು ಮತ್ತಷ್ಟು ವ್ಯಾಪಕವಾಗಿಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin