ಥಾಣೆಯಲ್ಲಿ ಭೀಕರ ಅಗ್ನಿ ಅವಘಡ : ಧಗಧಗಿಸಿದ ಪ್ಲಾಸ್ಟಿಕ್ ಕಾರ್ಖಾನೆ

ಈ ಸುದ್ದಿಯನ್ನು ಶೇರ್ ಮಾಡಿ

Plastic-Factory--01

ಥಾಣೆ, ನ.6-ಮಹಾರಾಷ್ಟ್ರ ಪಲ್ಗರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ ಭೀಕರ ಅಗ್ನಿ ದುರಂತದಲ್ಲಿ ಪಾಲಿಯೆಸ್ಟರ್ ಯಾರ್ನ್ ಪ್ಲಾಸ್ಟಿಕ್  ತಯಾರಿಕಾ ಘಟಕ ಸಟ್ಟು ಭಸ್ಮವಾಗಿದೆ. ಈ ದುರಂತದಲ್ಲಿ ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲವಾದರೂ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.  ವಾಡಾ ತಾಲ್ಲೂಕಿನ ಕುದೂಸ್ ಬಳಿ ಇರುವ ಈ ಘಟಕದ ಒಂದು ಭಾಗದಲ್ಲಿ ಇಂದು ಮುಂಜಾನೆ ಕಾಣಿಸಿಕೊಂಡ ಬೆಂಕಿ ಕೆಲಕಾಲದಲ್ಲೇ ಇಡೀ ಕಟ್ಟಡವನ್ನು ಆವರಿಸಿತು. ಬೆಂಕಿಯ ಜ್ವಾಲೆಗಳು ಧಗಧಗಿಸಿ ಇಡೀ ಘಟಕ ಸುಟ್ಟು ಬೂದಿಯಾಯಿತು ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಎಸ್.ಎನ್.ಚೌದಾರ್ ಹೇಳಿದ್ದಾರೆ.

ಬೆಂಕಿ ಆಕಸ್ಮಿಕದ ಸುದ್ದಿ ತಿಳಿಯುತ್ತಿದ್ದಂತೆ ಭೀವಂಡಿ, ಕಲ್ಯಾಣ ಮತ್ತು ಇತರ ಪ್ರದೇಶಗಳಿಂದ 10 ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಹು ಪ್ರಯಾಸದಿಂದ ಆರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು.  ದಹನಶೀಲ ಗುಣವುಳ್ಳ ಪಾಲಿಯೆಸ್ಟರ್‍ಗೆ ಬೆಂಕಿ ತಗುಲಿ ಕೆಲ ನಿಮಿಷಗಳಲ್ಲೇ ಬೃಹತ್ ದಾಸ್ತಾನು ಭಸ್ಮವಾಗಿದ್ದು ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವರಿಸಿ ಆತಂಕ ಸೃಷ್ಟಿಸಿತ್ತು. ಈ ದುರಂತಕ್ಕೆ ಶಾರ್ಟ್‍ಸಕ್ಯೂರ್ಟ್ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಡಾರ್ಜಿಲಿಂಗ್‍ನಲ್ಲಿ ಬೆಂಕಿ ಆಕಸ್ಮಿಕ:

ಡಾರ್ಜಿಲಿಂಗ್ ಗಿರಿಧಾಮದ ಸೊನಾಡದ ಮುಂಡಕೋತಿ ಟೀ ಎಸ್ಟೇಸ್ಟ್‍ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೆಂಕಿ ದುರಂತದಿಂದ ಮನೆಯೊಂದು ಸುಟ್ಟು ಬೂದಿಯಾಗಿದೆ. ಈ ದುರಂತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.  ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ನೆರೆಹೊರೆಯವರು ಬೆಂಕಿಯನ್ನು ನಂದಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin