ಥಿಯೇಟರ್’ನಲ್ಲಿ ‘ಎಡಕಲು ಗುಡ್ಡದ ಮೇಲೆ’

ಈ ಸುದ್ದಿಯನ್ನು ಶೇರ್ ಮಾಡಿ

edakalu-Guddada-Mele--1

ಗುಡ್ಡ ಏರಲು ರೆಡಿ. ದಶಕಗಳ ಹಿಂದೆ ಬಿಡುಗಡೆಗೊಂಡು ಈಗಲೂ ಸಿನಿ ಪ್ರಿಯರ ಮನದಲ್ಲಿ ಸದಾ ಅಚ್ಚಳಿಯದಂತೆ ಉಳಿದಿರುವಂತಹ ಚಿತ್ರ ಎಡಕಲ್ಲು ಗುಡ್ಡದ ಮೇಲೆ.ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ನಟಿ ಜಯಂತಿ, ಚಂದ್ರಶೇಖರ್ ಮುಖ್ಯ ಭೂಮಿಕೆಯಲ್ಲಿ ಬಂದಂತಹ ಚಿತ್ರ ಇಂದಿಗೂ ಅಜರಾಮರ. ಈಗ ಅದೇ ಶೀರ್ಷಿಕೆಯಲ್ಲಿ ಮತ್ತೊಂದು ಪ್ರಯತ್ನದೊಂದಿಗೆ ಶ್ರೀ ಸಾಯಿಸಿದ್ಧಿ ಪ್ರೊಡಕ್ಷನ್ ಲಾಂಛನದಲ್ಲಿ ವಿವಿನ್ ಸೂರ್ಯ ಅವರ ನಿರ್ದೇಶನ ಹಾಗೂ ಜಿ.ಪಿ. ಪ್ರಕಾಶ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಎಡಕಲ್ಲು ಗುಡ್ದದ ಮೇಲೆ ಚಿತ್ರವು ಈ ವಾರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿ ಸೋಮವಾರ ಎಸ್‍ಆರ್‍ವಿ ಥಿಯೇಟರ್‍ನಲ್ಲಿ ನಡೆಯಿತು.

ದಿನದ ಹೆಚ್ಚಿನ ಪಾಲನ್ನು ತಮ್ಮ ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಉದ್ಯೋಗದಲ್ಲೇ ಕಳೆಯುವಂಥ ಪೋಷಕರಿಗೆ ಈ ಚಿತ್ರದಲ್ಲಿ ಒಂದು ಉತ್ತಮ ಸಂದೇಶವಿದೆ. ತನ್ನ ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತಳಾದ ಹೆಣ್ಣು ಮಗಳೊಬ್ಬಳ ಜೀವನದ ಕುರಿತಾದ ಕಥಾ ಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ವಿವಿನ್ ಸೂರ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕಲಾವಿದರಾಗಿ ಗುರುತಿಸಿಕೊಂಡಿದ್ದ ವಿವಿನ್ ಸೂರ್ಯ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಹಾಗೂ ಕೌಟುಂಬಿಕ ಸಂಬಂಧಗಳ ಸುತ್ತ ನಡೆಯುವಂಥ ಕಥೆ ಆಧರಿಸಿ ಹೆಣೆದಿರುವ ಚಲನಚಿತ್ರವಾಗಿದೆ. ಇತ್ತೀಚೆಗೆ ಈ ಚಿತ್ರವು ಪ್ರಪಂಚದ ಹಲವಾರು ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್‍ಗಳಲ್ಲಿ ಪಾಲ್ಗೊಂಡು 4 ಕೆಟಗರಿಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಮೈಸೂರು ಮೂಲದ ನಿರ್ಮಾಪಕ ಜಿ.ಪಿ. ಪ್ರಕಾಶ್ ಅವರು ನಮ್ಮ ಚಿತ್ರ ರಿಲೀಸ್‍ಗೂ ಮುನ್ನವೇ ಪ್ರಪಂಚದ ವಿವಿಧ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದು ಎಲ್ಲ ಕಡೆಗಳಲ್ಲಿ ಪ್ರಶಂಸೆ ಗಳಿಸಿಕೊಂಡಿದೆ ಎಂದು ತುಂಬಾ ಖುಷಿಯಿಂದ ಹೇಳಿಕೊಂಡರು. ಇದೊಂದು ಶಿಕ್ಷಣ ಹಾಗೂ ಕಲಾತ್ಮಕತೆ ಎರಡೂ ಅಂಶಗಳನ್ನು ಒಳಗೊಂಡಂಥ ಬ್ರಿಡ್ಜ್ ಚಿತ್ರವಾಗಿದೆ. ಆಶಿಕ್ ಅರುಣ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶಂಕರ್ ಅವರ ಛಾಯಾಗ್ರಹಣವಿದೆ. ವಿಜಯ್ ಎಂ. ಕುಮಾರ್ ಅವರ ಸಂಕಲನ ಹಾಗೂ ಸದಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ಕಿರುತೆರೆ ಕಲಾವಿದೆ ಸ್ವಾತಿ ಶರ್ಮ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನಾಯಕನ ಪಾತ್ರ ಮಾಡಿರುವ ನಕುಲ್ ಮೈಸೂರು ಮೂಲದ ಹುಡುಗ. ಇನ್ನು ಉಳಿದ ಪ್ರಮುಖ ತಾರಾಬಳಗದಲ್ಲಿ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಎಡಕಲ್ಲು ಗುಡ್ಡ ಖ್ಯಾತಿಯ ಚಂದ್ರಶೇಖರ್, ಶ್ರೀನಾಥ್, ಸುಮಿತ್ರ, ದತ್ತಣ್ಣ, ಮುಗೂರು ಸುರೇಶ್, ಚಿದಾನಂದ್, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್, ಲಕ್ಷ್ಮೀ ಸಿದ್ದಯ್ಯ, ಪದ್ಮಜÁರಾವ್, ಸಿಹಿಕಹಿ ಚಂದ್ರು, ರವಿಭಟ್, ಉಷಾ  ಭಂಡಾರಿ, ಧರ್ಮೇಂದ್ರ, ಪ್ರಗತಿ, ವೈಭವಿ, ಮೇಘನ ಮುಂತಾದವರಿದ್ದಾರೆ.
ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಅದ್ಧೂರಿ ಪ್ರಚಾರ ಮಾಡುವ ಮೂಲಕ ಬೆಳ್ಳಿ ಪರದೆ ಮೇಲೆ ಗುಡ್ಡವನ್ನೇರಲು ಬರುತ್ತಿದೆ ಈ ಒಂದು ಯುವ ಪಡೆಗಳ ತಂಡ.
ಇನ್ನೇನಿದ್ದರೂ ಪ್ರೇಕ್ಷಕ ಪ್ರಭುಗಳು ಈ ವಿನೂತನ ಪ್ರಯತ್ನದ ಚಿತ್ರವನ್ನು ನೋಡಿ ಯಾವ ರೀತಿ ಇದೆ ಎಂಬುದನ್ನು ನಿರ್ಧರಿಸಬೇಕಿದೆ.

Facebook Comments

Sri Raghav

Admin