ಥಿಯೇಟರ್ ಗಳಲ್ಲಿ ‘ಚೂರಿಕಟ್ಟೆ’ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

choori-katte

ಚಂದನವನದಲ್ಲಿ ಈ ವಾರ ನೈಜಕ್ಕೆ ಹತ್ತಿರವಾದಂತಹ ಕಥಾಹಂದರವುಳ್ಳ ಚಿತ್ರವೊಂದು ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಚೂರಿಕಟ್ಟೆ ಎಂಬ ಟಿಂಬರ್ ಮಾಫಿಯಾ ಕಥೆಯನ್ನು ಒಳಗೊಂಡಿರುವ ಈ ಚಿತ್ರ ಇದೇ ವಾರ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚೌಕಾಬಾರಾ ಎಂಬ ಕಿರುಚಿತ್ರವೊಂದರ ಮೂಲಕ ಸುದ್ದಿಯಾಗಿದ್ದ ರಾಘು ಶಿವಮೊಗ್ಗ ಈಗ ಚೂರಿಕಟ್ಟೆ ಎಂಬ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ.
ಬಹುತೇಕ ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರೇ ಸೇರಿ ಕೆಲಸ ಮಾಡಿರುವ ವಿನೂತನ ಕಥಾನಕ ಹೊಂದಿದ ಈ ಚಿತ್ರದ ಬಗ್ಗೆ ಮಾತನಾಡಲು ತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಮೊದಲಿಗೆ ನಾಯಕನಟ ಪ್ರವೀಣ್ ತೇಜ್ ಮಾತನಾಡಿ, ಪಾತ್ರಕ್ಕೆ ತಕ್ಕಂತೆ ನಾನು ಚಿತ್ರದಲ್ಲಿ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಪಾತ್ರಕ್ಕಾಗಿ ದೇಹವನ್ನು ದಂಡಿಸಬೇಕಾದ ಕಾರಣ ವ್ಯಾಯಾಮ ಮಾಡಿ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕ್ಯಾಮೆರಾ ಮುಂದೆ ನಿಲ್ಲಬೇಕಾಯಿತು. ಟಿಂಬರ್ ಮಾಫಿಯಾ ಮತ್ತು ಪೆÇಲೀಸ್ ವ್ಯವಸ್ಥೆ ಎರಡನ್ನು ಬೆರೆಸಿ ಮಾಡಿದಂಥ ಕಥೆಯಿದು ಎಂದು ಹೇಳಿದರು. ಸ್ವಾರ್ಥಕ್ಕಾಗಿ ಬದುಕುವ ಅರಣ್ಯಾಧಿಕಾರಿಯ ಪಾತ್ರದಲ್ಲಿ ಮಂಜುನಾಥ್ ಹೆಗಡೆ ಕಾಣಿಸಿಕೊಂಡಿದ್ದು, ಟಿಂಬರ್ ಮಾಫಿಯಾ ಡಾನ್ ಆಗಿ ಶರತ್ ಲೋಹಿತಾಶ್ವ ಮಿಂಚಿದ್ದಾರಂತೆ.
ಕಳ್ಳ ಸಾಗಾಣಿಕೆಯಿಂದ ನಮ್ಮ ರಾಜ್ಯದ ಅರಣ್ಯಗಳು ವಿನಾಶದ ಅಂಚಿನತ್ತ ಸಾಗುತ್ತಿರುವ ಕಾಲದಲ್ಲಿ ಚೂರಿಕಟ್ಟೆ ಎಂಬ ವಿಭಿನ್ನ ಕಥಾಹಂದರದ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ನಿರ್ದೇಶಕ ರಾಘು ಶಿವಮೊಗ್ಗ ಅವರು ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ರಾಮಾ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅದ್ವೈತ ಗುರುಮೂರ್ತಿ ಈ ಚಿತ್ರದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಾರ್ನಿಂಗ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್.ನಯಾಜ್ ಹಾಗೂ ಎಂ.ತುಳಸಿರಾಮುಡು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿರುವ ಪ್ರೇರಣಾ ಮಾತನಾಡುತ್ತ ಈ ಚಿತ್ರದಲ್ಲಿ ನನಗೆ ಗುರುತಿಸಿಕೊಳ್ಳುವಂಥ ಪಾತ್ರವಿದೆ. ಚಿತ್ರ ಬಿಡುಗಡೆಯಾದ ನಂತರ ನಾವೆಲ್ಲ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತೇವೆ ಎಂಬ ಭರವಸೆಯ ಮಾತುಗಳನ್ನಾಡಿದರು.
ತಮ್ಮ ನಿರ್ದೇಶನದ ಮೊದಲ ಚಿತ್ರದ ಬಗ್ಗೆ ಮಾತನಾಡಿದ ರಾಘು ಶಿವಮೊಗ್ಗ ಚಿತ್ರ ಇದೇ 26ರಂದು ಬಿಡುಗಡೆಯಾಗುತ್ತಿದೆ. ಇಡೀ ಚಿತ್ರವನ್ನು ಕಾಡಿನಲ್ಲಿ ಅದೂ ರಾತ್ರಿಯೇ ಚಿತ್ರೀಕರಿಸಿರುವುದು ವಿಶೇಷ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಚಿತ್ರದ ಕುರಿತು ಒಂದಷ್ಟು ಮಾಹಿತಿ ನೀಡಿದರು. ಬಹಳಷ್ಟು ನಿರೀಕ್ಷೆಯೊಂದಿಗೆ ಚೂರಿಕಟ್ಟೆ ಬೆಳ್ಳಿ ಪರದೆ ಮೇಲೆ ಬರುತ್ತಿದ್ದು, ಮಾಫಿಯಾದ ಕರಾಳ ಮುಖಗಳನ್ನು ತೆರೆ ಮೇಲೆ ಪ್ರೇಕ್ಷಕರು ನೋಡಬಹುದಾಗಿದೆ.

Facebook Comments

Sri Raghav

Admin