ಥೈಲೆಂಡ್ ನಲ್ಲಿ ಕಾರ್ ಬಾಂಬ್ ಸ್ಫೋಟ : 1 ಸಾವು, 30 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Car-Bomb

ಬ್ಯಾಂಕಾಕ್, ಆ.24- ಥೈಲೆಂಡ್ನ ಹಿಂಸಾಚಾರ ಪೀಡಿತ ದಕ್ಷಿಣ ಪ್ರಾಂತ್ಯದ ಹೋಟೆಲ್ ಒಂದರಲ್ಲಿ ನಿನ್ನೆ ಮಧ್ಯರಾತ್ರಿ ಪ್ರಬಲ ಕಾರ್ ಬಾಂಬ್ ಸ್ಫೋಟಗೊಂಡು ಓರ್ವ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ.   ಉಗ್ರಗಾಮಿಗಳ ಹಾವಳಿಗೆ ತುತ್ತಾಗಿರುವ ಥೈಲೆಂಡ್ನ ದಕ್ಷಿಣ ಪ್ರಾಂತ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮುಸ್ಲಿಮರ ಪ್ರಾಬಲ್ಯವಿರುವ ಮೂರು ಪ್ರಾಂತ್ಯಗಳಲ್ಲಿ ಒಂದಾ ಪಟ್ಟಾನಿ ಹೊರವಲಯದ ಹೋಟೆಲ್ನಲ್ಲಿ ನಿನ್ನೆ ಮಧ್ಯರಾತ್ರಿ ಕಾರ್ ಬಾಂಬ್ ಆಸ್ಪೋಟಗೊಂಡಿತು. ಈ ದಾಳಿಯಲ್ಲಿ ಓರ್ವ, ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶವು ಪ್ರವಾಸಿಗಳಿಗೆ ಸುರಕ್ಷಿತವಲ್ಲ. ಈ ತಿಂಗಳ ಆರಂಭದಿಂದ ಥೈಲೆಂಡ್ನ ರೆಸಾರ್ಟ್ ಪಟ್ಟಣಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ. ಶಾಂತಿ ಸಂಧಾನ ಮಾತುಕತೆಗಳು ಸ್ಥಗಿತಗೊಂಡ ನಂತರ ಉಗ್ರಗಾಮಿಗಳ ಉಪಟಳವು ದಕ್ಷಿಣ ಪ್ರಾಂತ್ಯಕ್ಕೂ ವಿಸ್ತರಿಸುತ್ತಿದೆ ಎಂಬ ಆತಂಕವೂ ಉಂಟಾಗಿದೆ.   ಕಳೆದ 12 ವರ್ಷಗಳಿಂದ ಥೈಲೆಂಡ್ನ ವಿವಿಧೆಡೆ ನಡೆದ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳಲ್ಲಿ 6,500ಕ್ಕೂ ಹೆಚ್ಚು ಮಂದಿ ಹತರಾಗಿ, ಸಾವಿರಾರು ನಾಗರಿಕರು ಗಾಯಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin