ಥೈಲೆಂಡ್ : ಸರಣಿ ಬಾಂಬ್ ಸ್ಫೋಟದಲ್ಲಿ 6ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bomb-Blas-t

ಹುವಾ ಹಿನ್(ಥೈಲೆಂಡ್),ಆ.12– ಕಳೆದ 24 ತಾಸುಗಳ ಅವಧಿಯಲ್ಲಿ ಥೈಲೆಂಡ್‍ನ  ಹಲವೆಡೆ ನಡೆದ ಸುಮಾರು ಎಂಟು ಬಾಂಬ್ ಸ್ಫೋಟಗಳಲ್ಲಿ  ಆರಕ್ಕೂ ಹೆಚ್ಚು ಮಂದಿ ಮೃತಪಟ್ಟು ಹಲವರು ತೀವ್ರ ಗಾಯಗೊಂಡಿದ್ದಾರೆ.   ಥೈಲೆಂಡ್‍ನ ರೆಸಾರ್ಟ್ ಪಟ್ಟಣ ಹುವಾ ಹಿನ್ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಈ ಸ್ಫೋಟಗಳು ಸಂಭವಿಸಿ ಸಾವು-ನೋವು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಇಂದು ಬೆಳಗ್ಗೆ ಗಡಿಯಾರ ಗೋಪುರದಲ್ಲಿ ಅವಳಿ ಬಾಂಬ್‍ಗಳು ಆಸ್ಫೋಟ ಗೊಂಡು ನಾಲ್ವರು ಹತರಾಗಿ, ಮೂರು ಮಂದಿ ಗಾಯಗೊಂಡರು.   ಪ್ರವಾಸಿಗರ ಮೋಜಿನ ತಾಣ ಪ್ಯಾಕೆಟ್ ದ್ವೀಪದಲ್ಲಿ ಸುರಾತ್ ಥಾಣಿಯ ಐಲ್ಯಾಂಡ್ ಗೇಟ್ ವೇ ಪಟ್ಟಣದಲ್ಲಿ ಹಾಗೂ ದಕ್ಷಿಣ ಟ್ರಾಂಗ್‍ನಲ್ಲಿ ಇನ್ನೂ ಆರು ಬಾಂಬ್‍ಗಳು ಸ್ಫೋಟಿಸಿದ್ದು ಸಾವು-ನೋವು ಸಂಭವಿಸಿದೆ. ಹುವಾ ಹಿನ್‍ನಲ್ಲಿ ಒಟ್ಟು ನಾಲ್ಕು ಸ್ಫೋಟಗಳು ನಡೆದಿವೆ.  ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳೂ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Facebook Comments

Sri Raghav

Admin