ಥ್ರಿಲ್ಲರ್ ಕಥೆಯ ‘6 ಟು 6’ ಚಿತ್ರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

6-TO-6-1
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಒಂದಷ್ಟು ಕುತೂಹಲಕರ ಘಟನೆ ಗಳನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಾಣವಾದ ಥ್ರಿಲ್ಲರ್ ಕಥಾನಕವೇ 6 ಟು 6. ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿ ಸೋಮವಾರ ನಡೆಯಿತು.
ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದ, ತಂತ್ರಜ್ಞರೆಲ್ಲಾ ಹಾಜರಿದ್ದು , ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಈ ಹಿಂದೆ ಹಸೆಮಣೆ, ಆಕಾಶ ದೀಪ, ಈಶ್ವರಿ, ಸುಮತಿ ಸೇರಿದಂತೆ ಹಲವಾರು ಧಾರಾವಾಹಿಗಳ ನಿರ್ದೇಶನ ಮಾಡಿರುವ ಶ್ರೀನಿವಾಸ ಶಿಡ್ಲಘಟ್ಟ ಅವರು ಒಂದು ಜರ್ನಿ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ.

ದೃಶ್ಯ ಖ್ಯಾತಿಯ ನಟಿ ಸ್ವರೂಪಿಣಿ ಹಾಗೂ ತಾರಕ್ ಪೊನ್ನಪ್ಪ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಶಂಖನಾದ ಅರವಿಂದ್ ಅವರ ಪುತ್ರ ಅಭಿಷೇಕ್ ಎಂ.ಎ. ನಿರ್ಮಾಣ ಮಾಡಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ನಟ ಅರವಿಂದ್ ಈಗಿನ ಕಾಲದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟಕರವಾದುದು ಅದನ್ನು ಬಿಡುಗಡೆ ಮಾಡುವುದು. ನಮ್ ಸ್ನೇಹಿತರ ಜೊತೆಗೂಡಿ ನಾನೇ ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇನೆ. ಕೆಲವರು ಹಿರಿಯ ನಟ ಎಂಬ ಗೌರವದಿಂದ ಥಿಯೇಟರ್ ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳಿದರು.  ಅರವಿಂದ್ ಅವರ ಪುತ್ರಿ ಮಾನಸ ಹೊಳ್ಳ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಸುರೇಶ್ ಹೆಬ್ಳೀಕರ್, ಸದಾಶಿವ ಬ್ರಹ್ಮಾವರ್, ಮೈಸೂರು ರಮಾನಂದ್ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿ ಅಭಿನ ಯಿಸಿದ್ದು, ಮಲೆನಾಡಿನ ಕೊಪ್ಪ, ಶೃಂಗೇರಿ, ಹೊರನಾಡು ಹಾಗೂ ಜಯಪುರದ ಸುತ್ತಮುತ್ತ ಈ ಚಿತ್ರಕ್ಕೆ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಸಂಗೀತ ನಿರ್ದೇಶಕಿ ಹಾಗೂ ಗಾಯಕಿ ಮಾನಸ ಹೊಳ್ಳ ಮಾತನಾಡಿ, ಆರಂಭದಲ್ಲಿ ಟಿವಿ ಸೀರಿಯಲ್‍ಗಳಿಗೆ ಟ್ಯೂನ್ ಹಾಕು ತ್ತಿದ್ದೆ. ಮೊದಲ ಬಾರಿಗೆ ಸಿನಿಮಾ ಸಂಗೀತ ನಿರ್ದೇಶನ ಮಾಡಿದ್ದೇನೆ.  ಅಲ್ಲದೇ ರೀರೆಕಾರ್ಡಿಂಗ್ ಕೂಡ ಮಾಡಿದ್ದೇನೆ. ಈವರೆಗೂ ಗಾಯಕಿ ಯಾಗಿ ಗುರುತಿಸಿಕೊಂಡಿದ್ದ ನಾನು ಸಂಗೀತ ಸಂಯೋಜನೆಗೆ ಎಂಟ್ರಿ ಆಗಿದ್ದೇನೆ. ಜನ ಇಷ್ಟಪಡುವರೆಂಬ ನಂಬಿಕೆ ಇದೆ ಎಂದು ಹೇಳಿದರು.  ಗಣೇಶ್ ಹೆಗಡೆ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

Facebook Comments

Sri Raghav

Admin