ಥ್ರಿಲ್ಲರ್-ಕ್ರೈಮ್‍ನ ಸುತ್ತ`ವೈರ’

ಈ ಸುದ್ದಿಯನ್ನು ಶೇರ್ ಮಾಡಿ

treelar

ಶ್ರೀ ಮುರಳಿ ಅಭಿನಯದಲ್ಲಿ ಬಂದಂತಹ ಚಿತ್ರ ರಥಾವರ ಚಿತ್ರ ನಿರ್ಮಿಸಿದ ಧರ್ಮಶ್ರೀ ಮಂಜುನಾಥ್ ನಿರ್ಮಿಸುತ್ತಿರುವ ಚಿತ್ರವೇ ವೈರ. ನವರಸನ್ ನಿರ್ದೇಶಿಸುತ್ತಿರುವ ಮತ್ತೊಂದು ವೈರ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಮೊನ್ನೆ ನಡೆಯಿತು. ಈ ಹಿಂದೆ ರಾಕ್ಷಸಿ ಎಂಬ ಚಿತ್ರದಲ್ಲಿ ನಟಿಸಿದ ನವರಸನ್ ಈಗ ವೈರ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.ಚಿತ್ರದ ಬಗ್ಗೆ ಮಾತನಾಡಿದ ನವರಸನ್, ಹಾರರ್, ಥ್ರಿಲ್ಲರ್ ಹಾಗೂ ಕ್ರೈಂನಂತಹ ಎಲ್ಲಾ ಅಂಶಗಳೂ ಇರುವ ಚಿತ್ರ ಇದಾಗಿದೆ. ಸಿನಿಮಾಗೆ ಬರುವಂತಹ ಪ್ರೇಕ್ಷಕರಿಗೆ ಡಿಫರೆಂಟ್ ಪ್ಯಾಟ್ರನ್ ಸಿನಿಮಾ ಸಿಗಲಿದೆ. ಅಲ್ಲದೆ ಪಕ್ಕಾ ಸ್ವಮೇಕ್ ಚಿತ್ರ ಇದಾಗಿದ್ದು, ಟೈಟಲಂ ಸಾಂಗ್ ಮಾತ್ರ ಈ ಚಿತ್ರದಲ್ಲಿದ್ದು , ರಾಜೇಶ್ ರಾಮನಾಥ ಅವರು ಸಂಗೀತ ಒದಗಿಸುತ್ತಿದ್ದಾರೆ. ಅಲ್ಲದೆ ನಾಯಕಿ ಪ್ರಧಾನ ಕಥಾನಕ ಚಿತ್ರದಲ್ಲಿದೆ. ಕಾಮನಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

ಬೆಂಗಳೂರಿನಿಂದ ಮಡಿಕೇರಿವರೆಗೆ ಟ್ರಾವೆಲ್‍ನಲ್ಲಿ ಸಾಗುವ ಕಥೆ ಇದಾಗಿದೆ. ಒಬ್ಬ ಫ್ರೆಂಡ್‍ಗೋಸ್ಕರ ಇನ್ನೊಬ್ಬ ಫ್ರೆಂಡ್ ಏನೇನು ಕೆಲಸ ಮಾಡುತ್ತಾನೆ. ಅನ್ನೋದೆ ಈ ಚಿತ್ರದ ಕಥೆ ಎಂದು ಹೇಳಿದರು.ಚಿತ್ರದ ನಾಯಕನಾಗಿ ಅಜಯ ಎಂಬ ಹೊಸ ಪ್ರತಿಭೆ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ ನೆಗೆಟಿವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ಉಗ್ರಂ ಮಂಜು ಈ ಚಿತ್ರದಲ್ಲಿ ಒಬ್ಬ ಇನ್‍ಸ್ಪೆಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಾಕ್ಷಸಿಯಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದ ನಟ ಕೆಂಪೇಗೌಡ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ ಎಂಬ ಮತ್ತೊಬ್ಬ ನಟ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin