ದಂಗಲ್ ಹುಡ್ಗಿ ಈಗ ಆಕರ್ಷಣೆಯ ಕೇಂದ್ರ ಬಿಂದು

ಈ ಸುದ್ದಿಯನ್ನು ಶೇರ್ ಮಾಡಿ

3

ಝೈರಾ ವಾಸಿಮ್-ಕಾಶ್ಮೀರದ ಈ ಬಾಲೆ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ ದಂಗಲ್‍ನಲ್ಲಿ ಭಾರತದ ಹೆಮ್ಮೆಯ ಕುಸ್ತಿಪಟು ಗೀತಾ ಫೊಗಟ್ ಪಾತ್ರದಲ್ಲಿ ಮಿಂಚಿರುವ ಝೈರಾ ಈಗ ಕಾಶ್ಮೀರಕ್ಕೂ ಕೀರ್ತಿ ತಂದಿದ್ದಾಳೆ. ಎಲ್ಲರೂ ಬಾಲೆಯ ಅಭಿನಯ ಪ್ರೌಡಿಮೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ವತಃ ಅಮೀರ್ ಖಾನ್ ಸೇರಿದಂತೆ ಬಾಲಿವುಡ್ ಖ್ಯಾತನಾಮರೂ ವಯಸ್ಸಿಗೆ ಮೀರಿದ ಈಕೆಯು ಪ್ರತಿಭೆಯನ್ನು ಕೊಂಡಾಡಿದ್ದಾರೆ. ಜನಪ್ರಿಯತೆಯ ಖುಷಿಯಲ್ಲಿರುವ ಈಕೆ ದಂಗಲ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸನ್ನಿವೇಶವನ್ನು ಹೇಳಿಕೊಂಡಿದ್ದಾಳೆ. ಚಿತ್ರೀಕರಣದ ವೇಳೆ ಅಭಿಮಾನಿಯೊಬ್ಬ ಝೈರಾ ಜೊತೆ ಫೋಟೋ  ತೆಗೆಸಿಕೊಳ್ಳಲು ಬಯಸಿದ. ಇದಕ್ಕೆ ಝೈರಾ ಕೂಡ ಖುಷಿಯಿಂದ ಒಪ್ಪಿದಳು.

ಫೋಟೋ  ತೆಗೆಸಿಕೊಂಡ ಅಭಿಮಾನಿ ಸಂತಸದಿಂದ ಥ್ಯಾಂಕ್ಸ್ ಭಯ್ಯಾ ಧನ್ಯವಾದ ಹೇಳಿದಂತೆ. ಹೈಸ್ಕೂಲ್ ಹುಡುಗನಂತೆ ಚಿಕ್ಕ ಕೂದಲಿನ ಕ್ರಾಪ್ ಮಾಡಿಸಿಕೊಂಡಿದ್ದ ಝೈರಾಳನ್ನು ಆ ಅಭಿಮಾನಿ ಹುಡುಗನೆಂದೇ ಭಾವಿಸಿದ್ದ. ಇದೇ ರೀತಿಯ ಅನುಭವಗಳು ಚಿತ್ರೀಕರಣದ ವೇಳೆ ಮರುಕಳಿಸಿತು. ಸಿನಿಮಾ ಬಿಡುಗಡೆಯಾದ ನಂತರ ಈಕೆ ಗೀತಾ ಪೊಗಟ್ ಪ್ರಾತಧಾರಿ ಎಂದು ಮನವರಿಕೆಯಾಗಿ ಅನೇಕರು ಅಚ್ಚರಿಯೊಂದಿಗೆ ಸಂತಸಪಟ್ಟರು. ಈಗ ಝೈರಾ ಹವಾ ಬಿ-ಟೌನ್‍ನಲ್ಲಿ ಜೋರಾಗಿದೆ. ಎಲ್ಲರೂ ಈಕೆಯನ್ನು ಸುಲಭವಾಗಿ ಗುರುತಿಸುತ್ತಾರೆ. ಮೊನ್ನೆ ಪುಟ್ಟ ಮಗುವೊಂದು ಈಕೆಯ ಬಳಿ ಬಂದು ನೀನು ಅಮೀರ್ ಖಾನ್ ಸಿನಿಮಾದಲ್ಲಿ ನಟಿಸಿರುವೆ ಅಲ್ಲವೇ ಎಂದು ಪ್ರಶ್ನಿಸಿತು. ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈಕೆಗೆ ಹೊಸ ಪ್ರಾಜೆಕ್ಟ್ ಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin