ದಂಡು ಪಾಳ್ಯ ಹಂತಕರಿಗೆ ಜೀವನ ಪರ್ಯಂತ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Dandupalya--

ಬೆಂಗಳೂರು, ನ.9- ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡು ಪಾಳ್ಯದ ಐವರು ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಜೀವನ ಪರ್ಯಂತ ಶಿಕ್ಷೆ ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವನಗೌಡ ಅವರು ಪ್ರಕರಣದ ಎಲ್ಲ ಆರೋಪಿಗಳಿಗೆ ಜೀವನ ಪರ್ಯಂತ ಶಿಕ್ಷೆ ಹಾಗೂ 5 ಸಾವಿರ ದಂಡಿ ವಿದಿಸಿ ತೀರ್ಪು ಪ್ರಕಟಿಸಿದರು.

ದಂಡು ಪಾಳ್ಯ ಗ್ಯಾಂಗ್‍ನ ದೊಡ್ಡ ಹನುಮ, ಮುನಿಕೃಷ್ಣ, ಲಕ್ಷ್ಮಿ, ನಲ್ಲತಿಮ್ಮ, ವೆಂಕಟೇಶ ಅವರುಗಳು ಅಪರಾಧಿಗಳೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜೀವನ ಪರ್ಯಂತ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. 2000 ಇಸವಿಯಲ್ಲಿ ನಗರದ ಅಗ್ರಹಾರ ದಾಸರಹಳ್ಳಿಯ ಮನೆಯೊಂದಕ್ಕೆ ನೀರು ಕೇಳುವ ನೆಪದಲ್ಲಿ ನುಗ್ಗಿದ್ದ ಈ ಐವರು ಆರೋಪಿಗಳು ಒಂಟಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ್ದರು. ಕಾಮಾಕ್ಷಿ ಪಾಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Facebook Comments

Sri Raghav

Admin