ದಂತದ ಶ್ರೀಕೃಷ್ಣ ಮೂರ್ತಿ ಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

2-Arrested--01

ಬೆಂಗಳೂರು, ಆ.11-ಆನೆ ದಂತದಿಂದ ಕೆತ್ತನೆ ಮಾಡಲಾಗಿದ್ದ ಶ್ರೀಕೃಷ್ಣನ ಮೂರ್ತಿಯನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸಚಿನ್ ನಿಕ್ಕಂ ಮತ್ತು ಮುರಳೀಧರ್ ಪವಾರ್ ಬಂಧಿತ ಆರೋಪಿಗಳು.  ಸುಬ್ರಹ್ಮಣ್ಯನಗರ ವ್ಯಾಪ್ತಿಯ ರಾಜಾಜಿನಗರ 1ನೆ ಬ್ಲಾಕ್, ಇ ಜೋನ್ ಎಲೆಕ್ಟ್ರಾನಿಕ್ ಶೋರೂಂ ಬಳಿಯ ಮನೆಯಲ್ಲಿ ಆನೆದಂತದಿಂದ ಕೆತ್ತನೆ ಮಾಡಿರುವ ಸುಮಾರು ಒಂದು ಅಡಿ ಉದ್ದದ ಶ್ರೀಕೃಷ್ಣನ ಮೂರ್ತಿಯನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಮೂರ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin