ದಂಪತಿಯನ್ನು ಕೊಂದು ಶವದ ಮುಖ ತಿಂದ ಭಯಾನಕ ನರಭಕ್ಷಕ ಈತ ..!

ಈ ಸುದ್ದಿಯನ್ನು ಶೇರ್ ಮಾಡಿ

Austin-Harrouff

ವಾಷಿಂಗ್ಟನ್, ನ.2-ಯುವಕನೊಬ್ಬ ದಂಪತಿಯನ್ನು ಕೊಂದು ಶವವೊಂದರ ಮುಖವನ್ನು ಭಕ್ಷಿಸಿದ ಭೀಭತ್ಸ ಘಟನೆಯಿಂದಾಗಿ ಇಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ. ತಾನು ನಡೆಸಿದ ಬೀಭತ್ಸ ಮತ್ತು ವಿಕೃತ ಕೃತ್ಯಗಳನ್ನು ಈ ನರಭಕ್ಷಕ ಎಳೆಎಳೆಯಾಗಿ ಬಿಚ್ಚಿಟ್ಟಾಗ ಪೊಲೀಸರೇ ಹೌಹಾರಿದರು…!  ಈ ಸೈಕೋಪಾತ್ ಯುವಕನ ಹೆಸರು-ಆಸ್ಟಿನ್ ಹರ್ರೌಫ್. ವಯಸ್ಸು-19 ವರ್ಷ. ಅಪರಾಧ-ಫ್ಲಾರಿಡಾದ ದಂಪತಿಯ ಹತ್ಯೆ ಮತ್ತು ಶವದ ಮುಖವನ್ನು ತಿಂದು ಹಾಕಿದ ಘೋರ ಕೃತ್ಯ.. ಈ ಭಯಾನಕ ಘಟನೆ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಸಂಚಲನ ಮೂಡಿಸಿತ್ತು.

ಆಸ್ಟಿನ್ ಆಗಸ್ಟ್ 15ರಂದು ಸೌತ್ ಫ್ಲಾರಿಡಾದ ದಂಪತಿ 59 ವರ್ಷದ ಸ್ಟೀವನ್ ಜಾನ್ ಮತ್ತು 53 ವರ್ಷದ ಮಿಚೆಲ್ಲೆ ಮಿಶ್ಕಾನ್‍ರನ್ನು ಅತ್ಯಂತ ಹರಿತವಾದ ಚಾಕು ಮತ್ತು ವೋಡ್ಕಾ ಮದ್ಯದ ಬಾಟಲ್‍ನಿಂದ ಭೀಕರವಾಗಿ ಕೊಂದಿದಲ್ಲದೇ ಜಾನ್‍ರ ಮುಖ ಮತ್ತು ಎದೆ ಭಾಗವನ್ನು ಭಕ್ಷಿಸಿದ್ದ. ಬಹುಕಾಲ ಶವದ ಬಳಿಯೇ ಇದ್ದ ಸೈಕೋಪಾತ್ ಯುವಕನನ್ನು ಪಾಮ್ ಬೀಚ್ ಪೆÇಲೀಸರು ಆಕಸ್ಮಿಕವಾಗಿ ಪತ್ತೆ ಮಾಡಿದರು.  ಈತ ಜಾನ್ ಶವದ ಮೇಲೆ ಕುಳಿತು ಮುಖದ ಭಾಗವನ್ನು ಕಚ್ಚಿ ಜಗಿದು ನೆಲಕ್ಕೆ ಉಗುಳುತ್ತಿದ್ದ ದೃಶ್ಯ ನೋಡಿ ಪೊಲೀಸರೇ ಭಯಭೀತರಾಗಿದ್ದರು. ಆತನ ಬಾಯಲ್ಲಿ ಶವದ ಕೂದಲಿನೊಂದಿಗೆ ರಕ್ತ ಒಸರುತ್ತಿತ್ತು. ಈತನನ್ನು ತಕ್ಷಣ ಬಂಧಿಸಲಾಯಿತು. ಆದರೆ ಈತನನ್ನು ಸೆರೆ ಹಿಡಿಯುವುದಕ್ಕೆ ಮೊದಲೇ ದಂಪತಿಯ ಗ್ಯಾರೇಜ್‍ನಲ್ಲಿದ್ದ ಕಾಸ್ಟಿಕ್ ರಾಸಾಯನಿಕ ಸೇವಿಸಿದ್ದ ಈತ ತೀವ್ರ ಆಸ್ವಸ್ಥನಾಗಿದ್ದ. ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ. ಈತ ಇತ್ತೀಚೆಗೆ ಚೇತರಿಸಿಕೊಂಡಿದ್ದು, ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರು.

ತಾನು ಜೋಡಿ ಕೊಲೆ ಮಾಡಿದ್ದು, ಶವ ಭಕ್ಷಣೆ ಮಾಡಿದ್ದಾಗಿ ಹರ್ರೌಫ್ ಇಲಾಖೆಯ ಸಾರ್ಜೆಂಟ್‍ಗೆ ವಿಚಾರಣೆ ವೇಳೆ ತಿಳಿಸಿದ್ದಾನೆ. ಫ್ಲಾರಿಡಾದ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿಯಾದ ಈತ ಮಾದಕ ವಸ್ತು ವ್ಯಸನಿ ಮತ್ತು ಮಾನಸಿಕ ಅಸ್ವಸ್ಥ ಎಂಬುದು ದೃಢಪಟ್ಟಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.

Facebook Comments

Sri Raghav

Admin