ದಂಪತಿಯ ‘ನಾಯಿ ಪ್ರೀತಿ’ : 5 ಕೋಟಿ ರೂ. ಸಂಪತ್ತಿನ ಒಡೆಯರಾಗಲಿವೆ ಈ ಜೋಡಿ ನಾಯಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Dog-Couple--01

ಮುಂಬೈ, ಮಾ.8– ಶ್ವಾನ ನಿಯತ್ತಿನ ಪ್ರಾಣಿ. ಸ್ವಾಮಿ ನಿಷ್ಠೆಯ ಜೀವಿ. ಮಕ್ಕಳಿಲ್ಲದ ಮಾಲೀಕರ ಮನಗೆದ್ದಿರುವ ಮುಂಬೈನ ಜೋಡಿ ಶ್ವಾನ 5 ಕೋಟಿ ರೂ. ಸಂಪತ್ತಿನ ಒಡೆಯರಾಗಲಿವೆ..!
ಗುಜರಾತಿ ಉದ್ಯಮಿ ನಿಮೇಶ್ ಸಚ್‍ದೇ(57) ಮತ್ತು ಅವರ ಪತ್ನಿ ಫೈನಾನ್ಷಿಯಲ್ ಕನ್ಸಲ್ಟೆಂಟ್ ನಂದಿನಿ ಸಚ್‍ದೇ(52) ಅವರ ಮುದ್ದಿನ ಶ್ವಾನಗಳಾದ ಬಡ್ಡಿ ಮತ್ತು ಟೈನಿಗೆ ಈ ದಂಪತಿ ಬಂಗಾರದ ಸರಗಳನ್ನು ಹಾಕಿ ಅವುಗಳ ಮೇಲಿರುವ ತಮ್ಮ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಈ ಶ್ವಾನಗಳಿಗೆ ಗೋಲ್ಡನ್ ರೀಟ್ರೀವರ್ಸ್ ಎಂಬ ಅನ್ವರ್ಥನಾಮವೂ ಇದೆ. ಅಲ್ಲದೇ ಈ ಜೋಡಿ ಶ್ವಾನ ಮುಂಬೈನ ಅತ್ಯಂತ ಶ್ರೀಮಂತ ನಾಯಿಗಳು ಎಂಬ ಹಿರಿಮೆಗೂ ಪಾತ್ರವಾಗಲಿವೆ.

ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸಿರುವ ಈ ಶ್ವಾನಗಳ ಹೆಸರಿನಲ್ಲಿ ತಮ್ಮ 5 ಕೋಟಿ ರೂ. ಮೌಲ್ಯದ ಇಡೀ ಆಸ್ತಿಯನ್ನು ಉಯಿಲು ಮಾಡಲಿದ್ದಾರೆ. ಇದಕ್ಕಾಗಿ ಟ್ರಸ್ಟೊಂದನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ.   ನಿಮೇಶ್ ಮತ್ತು ನಂದಿನಿ ಅವರ ಸಂಪತ್ತಿಗೆ ಉತ್ತರಾಧಿಕಾರಿಗಳಾಗುವ ಈ ಶ್ವಾನಗಳು ಸ್ಲಮ್‍ಡಾಗ್ ಮಿಲೇನಿಯರ್ ಅಲ್ಲ. ಬದಲಿಗೆ ಇವು ಬೆಳ್ಳಿ ತಟ್ಟೆಯನ್ನು ಬಾಯಲ್ಲಿಟ್ಟುಕೊಂಡು ಬೆಳೆದಿವೆ. ಆ ದಂಪತಿಗಳೊಂದಿಗೆ ಐಷಾರಾಮಿ ಜೀವನವನ್ನೂ ನಡೆಸುತ್ತಿವೆ.   ಈ ದಂಪತಿಯದ್ದು ಪ್ರೇಮ ವಿವಾಹ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮೊದಲ ಶಿಶುವಿನ ನಿರೀಕ್ಷೆಯ ಸಂತಸದಲ್ಲಿದಾಗ ನಂದಿನಿ ಅವರಿಗೆ ಗರ್ಭಪಾತವಾಯಿತು. ಮುಂದೆ ಆಕೆಗೆ ಮಕ್ಕಳಾಗುವ ಸಾಧ್ಯತೆಯನ್ನು ವೈದ್ಯರು ಕೈಚೆಲ್ಲಿದರು. ಐವಿಎಫ್ (ಪ್ರನಾಳ ಶಿಶು) ಹೊಂದುವ ಆಕಾಂಕ್ಷೆ ಹೊಂದಿದ್ದ ಇವರ ಬಾಳಿನಲ್ಲಿ ಬಡ್ಡಿ ಮತ್ತು ಟೈನಿ ಎಂಬ ಪುಟ್ಟ ಮುದ್ದಾದ ನಾಯಿ ಮರಿಗಳು ಪ್ರವೇಶಿಸಿದವು. ಮಕ್ಕಳಾಸೆ ತೊರೆದು ಈ ಮರಿಗಳನ್ನೇ ಮಕ್ಕಳಂತೆ ಬೆಳೆಸಿದರು. ಅವುಗಳಿಗೆ ಕಿಂಚಿತ್ತೂ ಕೊರತೆಯಾಗದಂತೆ ಸಕಲ ಐಭೋಗಗಳನ್ನು ನೀಡಿದರು. ಆ ಪ್ರಾಣಿಗಳೂ ಕೂಡ ಈ ದಂಪತಿಯನ್ನೇ ತಂದೆ-ತಾಯಿ ಎಂದು ತಿಳಿದಿವೆ. ಮಾನವ ಮತ್ತು ಪ್ರಾಣಿಗಳ ಅವಿನಾಭಾವ ಸಂಬಂಧಕ್ಕೆ ದ್ಯೋತಕ ಎಂಬಂತೆ ನಿಮೇಶ್-ನಂದಿನಿ ತಮ್ಮ ಸಮಸ್ತ ಆಸ್ತಿಯನ್ನು ನಾಯಿಗಳ ಹೆಸರಿಗೆ ಬರೆಯಲಿದ್ದಾರೆ.

ಅವುಗಳನ್ನು ನಾಯಿಗಳೆಂದು ಕರೆಯಬೇಡಿ…ಅವು ನಮ್ಮ ಮಕ್ಕಳಿದ್ದಂತೆ. ಅವುಗಳಿಗೆ ನಾವು ಬೆಳ್ಳಿ ತಟ್ಟೆಯಲ್ಲಿ ಆಹಾರ ನೀಡುತ್ತೇವೆ. ಅವು ನಮಗೆ ಮನುಷ್ಯರಿಗಿಂತ ಹೆಚ್ಚು ಮುಖ್ಯ ಎಂದು ನಂದಿನಿ ತಮ್ಮ ಶ್ವಾನಪ್ರೇಮವನ್ನು ಅಭಿವ್ಯಕ್ತಿಗೊಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin