ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ, 34ನೇ ಶತಕ ದಾಖಲಿಸಿದ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

KOhli--02

ಕೇಪ್ ಟೌನ್. ಫೆ.07 : ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಭರ್ಜರಿ ಶತಕದ(160) ಸಹಾಯದಿಂದ ಭಾರತ ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಿದೆ.  ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ಖಾತೆ ತೆರೆಯುವ ಮೊದಲೇ ಆರಂಭಿಕ ದಾಂಡಿಗ ರೋಹಿತ್ ಶರ್ಮಾ(0) ವಿಕೆಟ್ ಕಳೆದುಕೊಂಡಿತ್ತು. ನಂತರ ಬಂದ ನಾಯಕ ಕೊಹ್ಲಿ ಹಾಗೂ ಢವ ಅದ್ಭುತ ಆಟದಿಂದ ದಕ್ಷಿಣ ಆಫ್ರಿಕಾ ಭಾರಿ ಮೊತ್ತದ ಗುರಿ ನೀಡಿದೆ.

ಏಕದಿನ ಪಂದ್ಯದ ಆವೃತ್ತಿಯಲ್ಲಿ 34 ನೇ ಶತಕ ದಾಖಲಿಸಿರುವ ಕೊಹ್ಲಿ ಭಾರತ ತಂಡ 300 ರನ್ ಗಳನ್ನು ಪೇರಿಸಲು ಸಹಕಾರಿಯಾದರು, ವಿರಾಟ್ ಕೊಹ್ಲಿ ಅಜೇಯ 160 ರನ್ ಗಳನ್ನು ಗಳಿಸಿದರೆ, ಶಿಖರ್ ಧವನ್ 63 ಎಸೆತಗಳಲ್ಲಿ 76 ರನ್ ಗಳನ್ನು ಗಳಿಸಿ ತಂಡಕ್ಕೆ ನೆರವಾದರು. ದಕ್ಷಿಣ ಆಫ್ರಿಕಾ ಪರ ಜೆಬಿ ಡುಮಿನಿ 2 ವಿಕೆಟ್, ಕಾಂಗಿಸೋ ರಬಡಾ 1 ವಿಕೆಟ್, ಕ್ರಿಸ್ ಮೊರ್ರಿಸ್ 1 ವಿಕೆಟ್, ಇಮ್ರಾನ್ ತಾಹಿರ್ 1 ವಿಕೆಟ್ ಆಂಡಿಲೆ ಫೆಹ್ಲುಕ್ವೇವೊ 1 ವಿಕೆಟ್ ಗಳಿಸಿದ್ದಾರೆ.

Facebook Comments

Sri Raghav

Admin