ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಗೆ ಭಾರತ ತಂಡ ಪ್ರಕಟ : ರೈನಾಗೆ ಮಣೆ, ಕೊಹ್ಲಿಗೆ ಹೊಣೆ
ನವದೆಹಲಿ, ಜ.28- ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ನಲ್ಲಿ ಜಯಗಳಿಸಿದ ಬೆನ್ನಲ್ಲೇ ಆಫ್ರಿಕಾದ ವಿರುದ್ಧದ 3 ಟ್ವೆಂಟಿ-20 ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಿದೆ. ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರೂ ಆದರೆ ದಕ್ಷಿಣ ಆಫ್ರಿಕಾದ ವಿರುದ್ಧದ ಟ್ವೆಂಟಿ-20 ಸರಣಿಯ ತಂಡದ ಹೊಣೆಯನ್ನು ಅವರಿಗೆ ವಹಿಸಿದ್ದಾರೆ, ತಂಡವನ್ನು ಕೂಡಿಕೊಳ್ಳಲು ಹಾತೊರೆಯುತ್ತಿದ್ದ ಸುರೇಶ್ರೈನಾಗೂ ಮಣೆ ಹಾಕಲಾಗಿದೆ.
ಕನ್ನಡಿಗರಿಗೆ ಅವಕಾಶ: ಐಪಿಎಲ್ 11ರ ಆವೃತ್ತಿಯಲ್ಲಿ 11 ಕೋಟಿಗೆ ಭರ್ಜರಿ ಬಿಕರಿಯಾಗಿರುವ ಕನಡಿಗರಾದ ಕೆ.ಎಲ್.ರಾಹುಲ್, ಮನೀಷ್ ಪಾಂಡೆ ಅವರಿಗೆ ಸ್ಥಾನ ಕಲ್ಪಿಸಿದ್ದರೆ, 11.5 ಕೋಟಿಗೆ ಬಿಕರಿಯಾಗಿರುವ ಜಯಂತ್ ಉನ್ಕಟ್ರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಹಿರಿಯ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಸ್ಥಾನ ಪಡೆದಿದ್ದ ದೀಪಕ್ ಹೂಡ, ಮೊಹಮ್ಮದ್ ಶಿರಾಜ್, ವಾಷಿಂUಟನ್ ಸುಂದರ್, ಬಸಿಲ್ತಾಂಪಿಯವರನ್ನು ಆಯ್ಕೆ ಪಟ್ಟಿಯಿಂದ ಹೊರಗಿಡಲಾಗಿದೆ.
ರೈನಾಗೆ ಮಣೆ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಫೆಬ್ರುವರಿ 2017ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದರೂ ಯೋ ಯೋ ಟೆಸ್ಟ್ನಲ್ಲಿ ವಿಫಲರಾಗಿದ್ದ ಸುರೇಶ್ ರೈನಾ ಇತ್ತೀಚೆಗೆ ನಡೆದ ಸಯದ್ ಮುಷ್ತಾಕ್ ಅಲಿ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಗೆ ಪ್ರಕಟಗೊಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡದ ವಿವರ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಸುರೇಶ್ರೈನಾ, ಮಹೇಂದ್ರಸಿಂಗ್ ಧೋನಿ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ಮನೀಷ್ ಪಾಂಡೆ, ಅಕ್ಷರ್ಪಟೇಲ್, ಯಜುವೇಂದ್ರ ಚಹಾಲ್, ಕುಲ್ದೀಪ್ಯಾದವ್, ಭುವನೇಶ್ವರ್ಕುಮಾರ್, ಜಸ್ಪ್ರೀತ್ ಬೂಮ್ರಾ , ಜಯ್ದೇವ್ ಉನ್ಕಟ್ , ಶಾರ್ದೂಲ್ ಠಾಕೂರ್.
ಪಂದ್ಯಗಳು:
1ನೆ ಟ್ವೆಂಟಿ 20: ಫೆಬ್ರವರಿ 18- ಜೋಹಾನ್ಸ್ಬರ್ಗ್, 2ನೆ ಪಂದ್ಯ: ಫೆಬ್ರವರಿ 21- ಸೆಂಚೂರಿಯನ್. 3ನೆ ಪಂದ್ಯ: ಫೆಬ್ರವರಿ 24- ಕೇಪ್ಟೌನ್