ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜುಲೈ 26 : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದೆ. ಒಟ್ಟು 35 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಅಂಚೆ ಅಥವ ಖುದ್ದಾಗಿ ಸಲ್ಲಿಸಿದರೆ ಸ್ವೀಕರಿಸಲಾಗುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವ CBSE ಅಥವ ISCE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಜೆಓಸಿ, ಡಿಪ್ಲೊಮಾ ಇನ್ನಿತರೆ ಯಾವುದೇ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.

Job-Updates
ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಪ.ಜಾ/ಪ.ಪಂ/ಪ್ರವರ್ಗ -1 ಗರಿಷ್ಠ ವಯೋಮಿತಿ 40, 2ಎ/2ಬಿ/3ಎ/3ಬಿ 38, ಸಾಮಾನ್ಯ ವರ್ಗದವರಿಗೆ 35 ವರ್ಷಗಳು.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 250 ರೂ.ಗಳು. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ವರ್ಗಕ್ಕೆ ರೂ.500., ಆನ್‌ಲೈನ್‌ನಲ್ಲಿ ಅರ್ಜಿ ತುಂಬಿದ ಬಳಿಕ ಸಿಗುವ ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್ ತೆಗೆದುಕೊಂಡು ಅರ್ಜಿ ಶುಲ್ಕದೊಂದಿಗೆ ಕಾರ್ಪೊರೇಷನ್ ಅಥವ ಐಸಿಐಸಿಐ ಬ್ಯಾಂಕ್ನ ಕರ್ನಾಟಕದ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿ ಮಾಡಬಹುದು. ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ ಆಗಸ್ಟ್ 20, 2016.

ವಯೋಮಿತಿ : ಅರ್ಜಿ ಸಲ್ಲಿಕೆ ಮಾಡಲು ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ  ಸಾಮಾನ್ಯ ವರ್ಗ 35 ವರ್ಷ, 2ಎ/2ಬಿ/3ಎ/3ಬಿ 38 ವರ್ಷಗಳು. ಪ.ಜಾ/ಪ.ಪಂ/ಪ್ರವರ್ಗ -1 40 ವರ್ಷಗಳು. ವಿಧವೆಯರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ವಯೋಮಿತಿ ಸಡಿಲಿಕೆ ಇದೆ. ಅಭ್ಯರ್ಥಿಯು ಅರ್ಜಿಯ ಜೊತೆ 5 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವ ವಿವರವುಳ್ಳ ಲಕೋಟೆಯನ್ನು ಲಗತ್ತಿಸತಕ್ಕದ್ದು. ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ದಪ್ಪ ಅಕ್ಷರದಲ್ಲಿ  ಲಕೋಟೆ ಮೇಲೆ ಬರೆಯಬೇಕು.

Facebook Comments

Sri Raghav

Admin