ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್‍ ಸ್ವಿಪ್

ಈ ಸುದ್ದಿಯನ್ನು ಶೇರ್ ಮಾಡಿ

Dakshina-Kannad-a

ದಕ್ಷಿಣ ಕನ್ನಡ, ಮೇ 15- ಬಿಜೆಪಿ ದಕ್ಷಿಣ ಕನ್ನಡದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದೆ.  ಕಾಂಗ್ರೆಸ್ ವಿರುದ್ಧ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಪುತ್ತೂರು, ಸೂಳ್ಯಗಳಲ್ಲಿ ನಿರಾಯಾಸ ಗೆಲುವು ಸಾಧಿಸುವ ಮೂಲಕ ಬಿಜೆಪಿ ದಕ್ಷಿಣ ಕನ್ನಡದಲ್ಲಿ ಗೆಲುವಿನ ನಗೆ ಬೀರಿದೆ. ಬಿ.ಎ.ಮೊಯುದ್ದೀನ್ ಬಾವಾ ವಿರುದ್ಧ ಬಿಜೆಪಿಯ ಡಾ.ಭರತ್‍ಶೆಟ್ಟಿ, ಜಾನ್ ರಿಚರ್ಡ್ ಲೋಬೊ ವಿರುದ್ಧ ವೇದವ್ಯಾಸ್ ಕಾಮತ್, ಶಕುಂತಲಾ ಶೆಟ್ಟಿ ವಿರುದ್ಧ ಸಂಜೀವ್ ಮಠಂದೂರು, ಡಾ.ಬಿ.ರಘು ವಿರುದ್ಧ ಎಸ್.ಅಂಗಾರ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನ ಯು.ಟಿ.ಖಾದರ್ ಮಂಗಳೂರು ಕ್ಷೇತ್ರ ಹೊರತುಪಡಿಸಿ ಉಳಿದಂತೆ ದಕ್ಷಿಣ ಕನ್ನಡದಲ್ಲಿ ಬಿಜೆಪಿಯೇ ಪ್ರಾಬಲ್ಯ ಮೆರೆದಿದೆ.  [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]

Facebook Comments

Sri Raghav

Admin