ದಕ್ಷಿಣ ಲಿಬಿಯಾ ವಾಯುನೆಲೆ ಮೇಲೆ ಸೇನಾಪಡೆಗಳ ದಾಳಿ, 141 ಯೋಧರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Libia
ಟ್ರಿಪೋಲಿ, ಮೇ 20-ದಕ್ಷಿಣ ಲಿಬಿಯಾದ ವಾಯು ನೆಲೆಯೊಂದರ ಮೇಲೆ ಸರ್ಕಾರಿ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಸ್ವಘೋಷಿತ ಸರ್ವಾಧಿಕಾರಿ ಖಾಲೀಫಾ ಹಫ್ತಾರ್‍ಗೆ ನಿಷ್ಠರಾದ 141 ಯೋಧರು ಮತ್ತು ನಾಗರಿಕರು ಮೃತಪಟ್ಟಿರುವ ಘಟನೆ ಟ್ರಿಪೋಲಿಯಲ್ಲಿ ನಡೆದಿದೆ. ವಿಶ್ವಸಂಸ್ಥೆ ಬೆಂಬಲಿತ ಸರ್ಕಾರದ ಪರವಿರುವ ಥರ್ಡ್ ಪೋರ್ಸ್  ಮಿಲಿಷಿಯಾ ಬಣದ ಸದಸ್ಯರು ಹಫ್ತಾರ್‍ನ ಲಿಬಿಯನ್ ನ್ಯಾಷನಲ್ ಆರ್ಮಿ(ಎಲ್‍ಎನ್‍ಎ) ಬಳಸುತ್ತಿದ್ದ ವಾಯು ನೆಲೆ ಮೇಲೆ ಹಠಾತ್ ಆಕ್ರಮಣ ನಡೆಸಿತು ಎಂದು ಸೀನಾ ಮೂಲಗಳು ತಿಳಿಸಿವೆ.ದಕ್ಷಿಣ ಲಿಬಿಯಾ ಮೇಲೆ ಪ್ರಾಬಲ್ಯ ಸಾಧಿಸಲು ಸರ್ಕಾರಿ ಪಡೆಗಳು ಮತ್ತು ಹಫ್ತಾರ್ ಬಣಗಳ ನಡುವೆ ನಡೆದ ಇತ್ತೀಚಿನ ಭೀಕರ ಘರ್ಷಣೆ ಇದಾಗಿದೆ. ಈ ದಾಳಿ ಮತ್ತು ಪ್ರತಿದಾಳಿಯಲ್ಲಿ ಬ್ರಕ್ ಅಲ್-ಷಾಟಿ ವಾಯು ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನೇಕ ನಾಗರಿಕರೂ ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin