ದಕ್ಷಿಣ ಸುಡಾನ್’ನಲ್ಲಿ ಹಸಿವಿನ ಕೂಪದಲ್ಲಿ ನರಳುತ್ತಿದ್ದಾರೆ 20 ಲಕ್ಷ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Sudan--01

ಜುಬಾ (ದಕ್ಷಿಣ ಸುಡಾನ್), ಜೂ. 22-ದಕ್ಷಿಣ ಸುಡಾನ್‍ನಲ್ಲಿ ಭೀಕರ ಕ್ಷಾಮವಿಲ್ಲದ್ದಿದ್ದರೂ, ಸುಮಾರು 20 ಲಕ್ಷ ಮಂದಿ ಹಸಿವಿನ ಕರಾಳತೆಯಲ್ಲಿದ್ದಾರೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಅಂದರೆ 60 ಲಕ್ಷ ಜನ ಜುಲೈ ಅವಧಿಯಲ್ಲಿ ತೀವ್ರ ಆಹಾರ ಅಭದ್ರತೆಯನ್ನು ಎದುರಿಸಲಿದ್ದಾರೆ ಎಂದು ಸರ್ಕಾರ ಮತ್ತು ವಿಶ್ವಸಂಸ್ಥೆ ವರದಿಗಳು ತಿಳಿಸಿವೆ.   ದಕ್ಷಿಣ ಸುಡಾನ್‍ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಮಂಡಳಿ ಹಾಗೂ ವಿಶ್ವಸಂಸ್ಥೆಯ ಪರಿಷ್ಕರಿತ ಆಹಾರ ಮತ್ತು ಭದ್ರತೆ ವಿಶ್ಲೇಷಣೆ ತಿಳಿಸಿದೆ. ದೇಶದ ಜನರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ಮುಖ್ಯಸ್ಥ ಸರ್ಜ್ ಟೆಸಾಟ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin