ದಟ್ಟಹೊಗೆಯಿಂದಾಗಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 7 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Fog-Accidenrt

ಚಂಡೀಗಢ/ಬತಿಂಡಾ, ನ.6- ದಟ್ಟ ಹೊಗೆಯಿಂದ ವಾಹನ ಚಾಲಕರ ದೃಷ್ಟಿ ಮಬ್ಬಾಗಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟು, ಇತರ 19 ಜನ ಗಾಯಗೊಂಡಿರುವ ಘಟನೆ ಹರಿಯಾಣ ಮತ್ತು ಪಂಜಾಬ್‍ನಲ್ಲಿ ನಿನ್ನೆ ನಡೆದಿದೆ. ಕಳೆಯನ್ನು ನಾಶಪಡಿಸಲು ಮೆದೆಗೆ ಹಾಕಿದ ಬೆಂಕಿಯಿಂದ ಭುಗಿಲೆದ್ದ ದಟ್ಟ ಹೊಗೆ ಕಾರಣ ಈ ದುರಂತಗಳು ಸಂಭವಿಸಿದೆ.  ಡಬ್‍ವಾಲಿ-ಸಿರ್ಸಾ ರಸ್ತೆಯಲ್ಲಿ ದಟ್ಟ ಧೂಮ ಆವರಿಸಿದ್ದರಿಂದ ಹರ್ಯಾಣಕ್ಕೆ ತೆರಳುತ್ತಿದ್ದ ಮಿನಿ ಟ್ರಕ್ಕೊಂದು ಬಸ್ಸಿಗೆ ಅಪ್ಪಳಿಸಿದ ಪರಿಣಾಮವಾಗಿ ಎಂಟು ಕೂಲಿ ಕಾರ್ಮಿಕರು ಮೃತರಾದರು. ಈ ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

ಪಂಜಾಬ್‍ನ ಬತಿಂಡಾ ಜಿಲ್ಲೆಯ ಬತಿಂಡಾ-ಮಾನ್ಸ ರಸ್ತೆಯಲ್ಲಿ ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಈ ದುರ್ಘಟನೆಯಲ್ಲಿ ಇತರ ಆರು ಮಂದಿ ತೀವ್ರ ಗಾಯಗೊಂಡಿದ್ದಾರೆ.  ಹೊಗೆಯಿಂದಾಗಿ ಈ ರಾಜ್ಯಗಳ ಇತರೆಡೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಅನೇಕರು ಗಾಯಗೊಂಡಿದ್ದು, ಹಲವಾರು ವಾಹನಗಳು ಜಖಂಗೊಂಡಿವೆ.

► Follow us on –  Facebook / Twitter  / Google+

Facebook Comments

Sri Raghav

Admin