ದಟ್ಟ ಮಂಜಿನಿಂದಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Fog-Accident

ಚಂಡಿಗಢ, ಡಿ.9-ದಟ್ಟ ಮಂಜಿನಿಂದಾಗಿ ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು 17 ಮಂದಿ ದುರಂತ ಸಾವಿಗೀಡಾಗಿ, ಅನೇಕರ ಗಾಯಗೊಂಡಿದ್ದಾರೆ. ಪಂಜಾಬ್‍ನ ಫಾಜಿಲ್ಕಾ-ಫಿರೋಜ್‍ಪುರ್‍ನ ಚಾಂದ್‍ಮರ್ಜಿ ಬಳಿ ಇಂದು ಬೆಳಿಗ್ಗೆ ಮಿನಿ ಟೆಂಪೋ ಟ್ರಕ್‍ಗೆ ಅಪ್ಪಳಿಸಿ ಅದರಲ್ಲಿದ್ದ ಸರ್ಕಾರಿ ಶಾಲೆಯ 13 ಶಿಕ್ಷಕಿಯರು ಸಾವಿಗೀಡಾದರು. ಈ ದುರಂತದಲ್ಲಿ ಇನ್ನಿಬ್ಬರು ಶಿಕ್ಷಕಿಯರು ತೀವ್ರ ಗಾಯಗೊಂಡಿದ್ದಾರೆ.  ಹೆದ್ದಾರಿಯಲ್ಲಿ ಮಂಜು ಮುಸುಗಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ. ನಾಲ್ವರ ಸಾವು : ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಇಂದು ಬೆಳಿಗ್ಗೆ ನಿಂತಿದ್ದ ಟ್ರಕ್‍ಗೆ ಕಾರು ಅಪ್ಪಳಿಸಿ ನಂತರ ಉರುಳಿ ಬಿದ್ದು ನಾಲ್ವರು ಮೃತಪಟ್ಟು, ಇಬ್ಬರಿಗೆ ತೀವ್ರ ಗಾಯಗಳಾಗಿವೆ.

Facebook Comments

Sri Raghav

Admin