ದಡಾರ, ರುಬೆಲ್ಲಾ ರೋಗ ತಡೆಗಟ್ಟಲು ಲಸಿಕೆ ಹಾಕಿಸಿ

ಈ ಸುದ್ದಿಯನ್ನು ಶೇರ್ ಮಾಡಿ

gubbi

ಗುಬ್ಬಿ, ಫೆ.9-ಮಾರಣಾಂತಿಕ ರೋಗಗಳಾದ ದಡಾರ, ರುಬೆಲ್ಲಾ ರೋಗ ತಡೆಗಟ್ಟಲು 9 ತಿಂಗಳಿಂದ 15 ವರ್ಷದೊಳಪಟ್ಟ ಮಕ್ಕಳಿಗೆ ಈ ಲಸಿಕೆ ಹಾಕಲಾಗುತ್ತಿದ್ದು ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ರೋಗಗಳನ್ನು ಶಾಶ್ವತವಾಗಿ ತಡೆಗಟ್ಟುವತ್ತ ಮುಂದಾಗಬೇಕೆಂದು ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ ತಿಳಿಸಿದರು.  ಪಟ್ಟಣದ ಶುಭೋದಯ ಆಂಗ್ಲಶಾಲೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು ರುಬೆಲ್ಲಾ ರೋಗವು ಗರ್ಭಣಿಯರಲ್ಲಿ ಸಾಕಷ್ಟು ಕಾಡುತ್ತದೆ. ಮಗುವಿಗೆ ಕರುಡುತನ, ಮಾನಸಿಕ ಅಸ್ವಸ್ಥತತೆ, ಕಿವುಡುತನ, ಹೃದಯ ಸಂಬಂಧಿ ರೋಗ ಬರಲಿದ್ದು ಇದನ್ನು ತಡೆಗಟ್ಟಲು ನಿತ್ಯ 7 ಸಾವಿರ ಮಂದಿಗೆ ಲಸಿಕೆ ಹಾಕಲಾಗುವುದು ಎಂದರು.

ಎಂಆರ್ ಲಸಿಕೆಯನ್ನು ತಾಲೂಕಿನ 419 ಶಾಲೆಗಳ ಎಲ್ಲಾ ಮಕ್ಕಳಿಗೂ ಹಾಕಲಾಗುವುದು ಎನ್ನುತ್ತಾ ರೋಗಗಳ ಲಕ್ಷಣವನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ ಶುಭೈೂೀದಯ ಶಾಲಾ ಮಕ್ಕಳಿಗೆ ಲಸಿಕೆ ಹಾಕಲಾಯಿತು.ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆಯ ಆರೋಗ್ಯಧಿಕಾರಿ ಡಾ.ಪ್ರಶಾಂತ ತಾಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಆಡಳಿತ ವೈದ್ಯಾಧಿಕಾರಿ ಡಾ.ದೇವಾನಂದ್, ಸಿಡಿಪಿಒ ಹೊನ್ನೇಶಪ್ಪ, ಸಿಆರ್‍ಪಿ ಲಾಲಾನಾಯಕ್, ಡಾ.ನಾರಾಯಣಗೌಡ, ಶುಭೋದಯ  ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಎಲ್.ರಾಜಶೇಖರ್, ತಾಲೂಕು ಆರೋಗ್ಯ ನಿರೀಕ್ಷಕ ಜಯಣ್ಣ, ಅಂಗನವಾಡಿ ಮೇಲ್ವಿಚಾರಕರಾದ ಸ್ವರ್ಣ, ಶಿವಮ್ಮ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin