ದಡಾರ-ರುಬೆಲ್ಲಾ ಲಸಿಕೆ ಅಭಿಯಾನಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

13

ಬೆಳಗಾವಿ,ಫೆ.8- ಸರ್ಕಾರವು 2020ಕ್ಕೆ ದಡಾರ ನಿರ್ಮೂಲನೆ ಹಾಗೂ ರುಬೆಲ್ಲಾ ನಿಯಂತ್ರಣ ಸಾಧಿಸುವ ಗುರಿ ಹೊಂದಿದ್ದು, ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಕರೆ ನೀಡಿದರು.ನಗರದ ಕ್ಯಾಂಪ್‍ನಲ್ಲಿರುವ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದ ಜಿಲ್ಲಾಮಟ್ಟದ ಉದ್ಘಾಟನಾ ಸಮಾರಂಭವನ್ನು ಮಗುವಿಗೆ ಲಸಿಕೆ ಹಾಕಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಅವರು ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು 9ತಿಂಗಳಿನಿಂದ 15ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಕೋರಿದರು.

ಕೆಎಲ್‍ಇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ವ್ಹಿ.ಡಿ. ಪಾಟೀಲ ಅವರು ಮಾತನಾಡಿ, ದಡಾರ ಮತ್ತು ರುಬೆಲ್ಲಾ ಲಸಿಕೆ ಸುರಕ್ಷಿತವಾಗಿದ್ದು ಮತ್ತು ದಡಾರ ಮತ್ತು ರುಬೆಲ್ಲಾ ರೋಗದ ಬಗ್ಗೆ ವಿವರಿಸಿ ಎಂದು ಹೇಳಿದರು.ಜೆಎನ್‍ಎಂಸಿ ಪ್ರಾಂಶುಪಾಲರು ಡಾ. ಎನ್.ಎಸ್ ಮಹಾಂತಶೆಟ್ಟಿ, ಜೆಎನ್‍ಎಂಸಿ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರು ಡಾ. ಸುಜಾತಾ ಜಾಲಿ, ಲೈನ್ಸ್ ಇಂಟರನ್ಯಾಶನಲ್ ವೈಸ್ ಡಿಸ್ಟ್ರಿಕ್ ಗವರ್ನರ ಮೋನಿಕಾ ಸಾವಂತ, ಶಿಕ್ಷಣಾಧಿಕಾರಿ ಎಂ.ಆರ್ ಅಲಾಸೆ, ಬಿಇಓ ಬಿ.ಎಂ ನಲತವಾಡ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂಜೀವ ನಾಂದ್ರೆ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ. ಹುಸೇನಸಾಬ ಖಾಜಿ, ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ, ಎಸ್‍ಎಂಓ ಡಾ. ಅಮುಲ ಭೋಸಲೆ ಅವರು ಉಪಸ್ಥಿತರಿದ್ದರು.

ದೇಶವನ್ನು ಸೈನಿಕರು ಕಾಯ್ದಂತೆ ರೋಗ ನಿರೋಧಕಗಳು ದೇಹವನ್ನು ಕಾಯುತ್ತವೆ ಎಂದು ತಾಲೂಕ ವೈದ್ಯಾಧಿಕಾರಿ ಡಾ. ಆರ್.ಎಸ್ ಬೆಣಚಿನಮರ್ಡಿ ಹೇಳಿದರು.
ನಿನ್ನೆ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಡಾರ ಮತ್ತು ರಿಜಿಲ್ಲಾ ರೋಗಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಮಕ್ಕಳಿಗೆ ಲಸಿಕೆಗಳನ್ನು ಹಾಕುವುದರಿಂದ ಮುಂಜಾಗ್ರತವಾಗಿ ರೋಗಗಳು ಬರದಂತೆ ತಡೆಯಬಹುದು.

9ತಿಂಗಳಿಂದ 15ವರ್ಷದೊಳಗಿನ ಪ್ರತಿಯೊಂದು ಮಗುವಿಗೆ ಲಸಿಕೆ ಹಾಕಿಸಿ ದಡಾರ ಮತ್ತು ರುಜಿಲ್ಲಾ ರೋಗ ಬರದಂತೆ ಮುಂಜಾಗ್ರತೆ ವಹಿಸಿ ಮಕ್ಕಳ ಆರೋಗ್ಯ ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮವನ್ನು ನಗರಸಭೈ ಅಧ್ಯಕ್ಷ ತಳದಪ್ಪ ಅಮ್ಮಣಗಿ ಉದ್ಘಾಟಿಸಿದರು. ಜಿಪಂ ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಎಪಿಎಂಸಿ ಸದಸ್ಯ ಶಂಕರ ಹುರಕಡ್ಲಿ, ತಹಶೀಲ್ದಾರ್ ಜಿ.ಎಸ್ ಮಳಗಿ, ತಾಪಂ ಅಧಿಕಾರಿ ಎಸ್.ಸಿ ಚಿನ್ನನವರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ, ಪ್ರಾಚಾರ್ಯ ಬಿ.ಎಸ್ ಹಾದಿಮನಿ, ಪಿ.ಎಚ್ ಕೌಜಲಗಿ, ಜಿ.ಆರ್ ಮಳಗಿ, ಡಾ. ಅಶೋಕ ಪಾಟೀಲ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin