ದಬ್ಬೆಘಟ್ಟ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ತೀರ್ಮಾನ : ಎಂ.ಟಿ.ಕೃಷ್ಣಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

tumakuru--water

ತುರುವೇಕೆರೆ, ಅ.20- ದಬ್ಬೆಘಟ್ಟ ಹೋಬಳಿಯ ಕೆರೆಗಳಿಗೆ ಏತ ನೀರಾವರಿ ಮೂಲಕ ಹೇಮಾವತಿ ನೀರು ಹರಿಸಲು ಮುಂದಿನ ದಿನಗಳಲ್ಲಿ ತಿರ್ಮಾನಿಸಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ತಾಲೂಕಿನ ದಬ್ಬೆಘಟ್ಟ ಹೋಬಳಿಯ ಹಬುಕನಹಳ್ಳಿ ಗ್ರಾಮದಲ್ಲಿ ಕೆರೆ ನಿರ್ಮಿಸಲು ಸುಮಾರು 40 ಲಕ್ಷ ವ್ಯಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಹಲವು ವರ್ಷಗಳಿಂದ ತಾಲೂಕಿನ ದಬ್ಬೆಘಟ್ಟ ಹೋಬಳಿಗೆ ನೀರಿನ ಸಮಸ್ಯೆ ಕಾಡುತ್ತಿದೆ.

ಇದನ್ನು ಅರಿತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ದಬ್ಬೆಘಟ್ಟ ಕೆರೆಗೆ ಈಗಾಗಲೇ ಏತ ನೀರಾವರಿಯ ಮೂಲಕ ನೀರನ್ನು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೇಮಾವತಿ ನೀರನ್ನು ತುಂಬಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.ಜಿಪಂ ಸದಸ್ಯರಾದ ಭಾಗ್ಯ ರಮೇಶ್‍ಗೌಡ, ತಾಪಂ ಸದಸ್ಯ ಸ್ವಾಮಿ, ಅಲ್ಪಸಂಖ್ಯಾತರ ಮುಖಂಡ ಜಪ್ರುಲಾಖಾನ್, ಮುಖಂಡ ಹಬುಕನಹಳ್ಳಿ ಕುಮಾರ್, ಗಂಗಣ್ಣ, ಮಂಜಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ಲಕ್ಷ್ಮೀ ಪ್ರಸನ್ನ, ಎ.ಇ.ಲಕ್ಷ್ಮಣನಾಯಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin