ದಮನಕಾರಿ ಶಕ್ತಿ ವಿರುದ್ಧ ಧನಿ ಎತ್ತಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

KOLARA

ಕೋಲಾರ, ಸೆ.22- ದೇಶವನ್ನು ಕಾಡುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ದಮನ ಮಾಡಲು ಯುವಜನತೆ ಸರ್ಕಾರದೊಂದಿಗೆ ಕೈಜೋಡಿಸಬೇಕು, ದಮನಕಾರಿ ಶಕ್ತಿಗಳ ವಿರುದ್ದ ಧ್ವನಿಯೆತ್ತಬೇಕು ಎಂದು ಹೆಬ್ಬಾಳ ಶಾಸಕ ವೈ.ಎ.ನಾರಾಯಣಸ್ವಾಮಿ ಕರೆ ನೀಡಿದರು.  ನಗರದ ವಕ್ಕಲಿಗರ ಭವನದಲ್ಲಿ ಜಿಲ್ಲಾ ಸ್ಕೌಟ್ಸ್‍ಗೈಡ್ಸ್ ಆಶ್ರಯದಲ್ಲಿ ಅಂತರರಾಷ್ಟ್ರೀಯ ಶಾಂತಿದಿನದ ಅಂಗವಾಗಿ ಧ್ವಜಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಉರಿಯಲ್ಲಿ ನಡೆದ ಉಗ್ರಗಾಮಿಗಳ ದಾಳಿ ಪ್ರಸ್ತಾಪಿಸಿದ ಅವರು, ಪಾಪಿ ಪಾಕಿಸ್ತಾನ್ ಇಂತಹ ಉಗ್ರನೀತಿ ಅನುಸರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ಅದರ ನರಿ ಬುದ್ದಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.ದೇಶದಲ್ಲಿ ಎಲ್ಲೇ ದೇಶಘಾತುಕ ಚಟುವಟಿಕೆಗಳು ನಡೆಯುತ್ತಿರುವ ಸುಳಿವು ಸಿಕ್ಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಹೆಚ್ಚಿನ ಅನಾಹುತ ತಪ್ಪಿಸಿ ಎಂದು ಯುವಜನತೆಗೆ ಮನವಿ ಮಾಡಿದ ಅವರು, ಯುವಕರು ಹೆಚ್ಚು ಹೆಚ್ಚುಸೈನ್ಯಕ್ಕೆ ಸೇರಲು ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.

ಸ್ಕೌಟ್ಟ್‍ಗೈಡ್ಸ್‍ನ ಜಿಲ್ಲಾ ಸಂಘಟಕ ಬಾಬು, ನಾವು ಶಾಂತಿಧೂತರು, ವಿಶ್ವ ಶಾಂತಿಗಾಗಿ ಒಂದಾಗಿ ಬಾಳೋಣ ಎಂಬ ಸಂದೇಶದೊಂದಿಗೆ ಸ್ಕೌಟ್ಸ್‍ಗೈಡ್ಸ್ ಕೆಲಸ ಮಾಡುತ್ತಿದೆ, ಯುವಶಕ್ತಿಯನ್ನು ಶಾಂತಿಗಾಗಿ ಸಂಘಟಿಸುತ್ತಿದೆ ಎಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ, ಸ್ಕೌಟ್ಸ್‍ಗೈಡ್ಸ್‍ನ ಉಪಾಧ್ಯಕ್ಷ ಸುಭಾಷ್ ಶಾಲೆ ಗೋಪಾಲರೆಡ್ಡಿ, ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್, ಬಸವೇಶ್ವರ ಶಾಲೆಯ ಜಗದೀಶ್, ಸ್ಕೌಟ್ಸ್ ಸಂಸ್ಥೆಯ ವಿಶ್ವನಾಥ್, ಚೇತನ್ ಸತ್ಪಾಲ್, ಮಧು,ಭಾರ್ಗವಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin